Top Newsಕ್ರೈಂ ಸ್ಟೋರಿಸುದ್ದಿ

ಸಿನಿಮಾ ನೋಡಲು ಬಂದಿದ್ದ ಯುವತಿಗೆ ಕಾಮುಕನ ಕಾಟ: ವೀಡಿಯೋ ಮಾಡ್ತಿದ್ದ ಅಪ್ರಾಪ್ತ ಅರೆಸ್ಟ್

ಬೆಂಗಳೂರು:ಇತ್ತೀಚೆಗೆ ಕಾಮುಕರ ಹಾವಳಿ ಹೆಚ್ಚಾಗಿದ್ದು, ನಗರದ ಕಾಫಿ ಶಾಪ್ ಒಂದರ ವಾಶ್ ರೂಮ್‍ನಲ್ಲಿ ಮೊಬೈಲ್ ಇಟ್ಟು ವೀಡಿಯೋ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೇ ಬಗೆಯ ಪ್ರಕರಣ ಕಲಾಸಿಪಾಳ್ಯದಲ್ಲಿ ನಡೆದಿದೆ. ನಗರದ ಊರ್ವಶಿ ಚಿತ್ರಮಂದಿರದ ಮಹಿಳೆಯರ ವಾಶ್ ರೂಮ್‍ನಲ್ಲಿ ವೀಡಿಯೋ ಮಾಡಲು ಹೋಗಿ ಅಪ್ರಾಪ್ತನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಚಿತ್ರಮಂದಿರಕ್ಕೆ `ಭೀಮಾ’ ಚಿತ್ರ ನೋಡಲು ಯುವತಿಯೊಬ್ಬಳು ಬಂದಿದ್ದಳು. ಆಕೆ ವಾಶ್‌ ರೂಮ್‌ಗೆ ತೆರಳಿದ್ದ ವೇಳೆ, ಅಪ್ರಾಪ್ತನೊಬ್ಬ ಕದ್ದು ಮುಚ್ಚಿ ಮಹಿಳೆಯರ ವಾಶ್ ರೂಮ್‍ನಲ್ಲಿ ವೀಡಿಯೋ ಮಾಡಿದ್ದಾನೆ. ಕೂಡಲೇ ಯುವತಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಇದೀಗ ಅಪ್ರಾಪ್ತ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button