Freedom TV

ಮಳೆ ಅವಾಂತರ..

ವಿಜಯನಗರ: ಬಿಸಿಲಿನ ಬೇಗೆಯಿಂದ ಜನರು ತತ್ತರಿಸುತ್ತಿದ್ದಾಗ ವರುಣನ ಆಗಮನ ಕೆಲವು ಕಡೆ ಅವಾಂತರವನ್ನೆ ಸೃಷ್ಟಿಸಿದೆ. ರಾತ್ರಿ ಸುರಿದ  ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ರೈತರ ಬಾಳೆ, ಭತ್ತ, ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲೂ ಗಾಳಿ ಸಹಿತ ಮಳೆ ಆಗಿದ್ದು, ಹುರುಳಿಹಾಳ ಗ್ರಾಮದ ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ.

ಖಾನಾಹೊಸಹಳ್ಳಿ ಹೋಬಳಿಯ ಎಕ್ಕೆಗೊಂದಿ ಗ್ರಾಮದಲ್ಲಿ ರೇಷ್ಮೆ ಸಾಕಣೆ ಮನೆಗೆ ಹಾನಿ ಉಂಟಾಗಿದ್ದು, ರೈತ ಕಂಗಾಲಾಗಿದ್ದಾನೆ.

ಹರಪನಹಳ್ಳಿ ತಾಲೂಕಿನಲ್ಲಿ ಗುಡುಗು, ಮಿಂಚು ಸಿಡಿಲಿನ ಆರ್ಭಟ ಮಧ್ಯೆ ಸಾಧಾರಣ ಮಳೆ ವರದಿ

ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲೂ ಸರಾಸರಿ 10 ಮಿ.ಮೀ ಗೂ ಅಧಿಕ ಮಳೆಯಾಗಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ.

Comments (0)

Your email address will not be published. Required fields are marked *

Back to top button