Freedom TV
ಮತದಾರರಿಗೆ ನಮೋ ಎಂದ ಪ್ರಧಾನಿ…

ಮತದಾನ ಮಾಡಿದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ. X ನಲ್ಲಿ ಟ್ಬೀಟ್ ಮಾಡಿರುವ ನರೇಂದ್ರ ಮೋದಿಯವರು, ಇಂದು ಮತ ಚಲಾಯಿಸಿದ ಎಲ್ಲರಿಗೂ ಕೃತಜ್ಞತೆಗಳು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ, ಎಲ್ಲಾ ವರ್ಗಗಳ ಮತದಾರರು ಎನ್‌ಡಿಎ ಮತ್ತು ನಮ್ಮ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ನಂಬಿಕೆ ಇಟ್ಟಿದ್ದಾರೆ.
INDI ಅಲಯನ್ಸ್ ಇನ್ನಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತಿದೆ, ಅವರ ಹಿಂಜರಿಕೆಯ ಅರ್ಥಶಾಸ್ತ್ರ ಮತ್ತು ಹಳೆಯ ಮತಬ್ಯಾಂಕ್ ರಾಜಕೀಯಕ್ಕೆ ಧನ್ಯವಾದಗಳು ಎಂದು ನಮೋ ಕುಟುಕಿದ್ದಾರೆ..




