ರಾಜ್ಯಸುದ್ದಿ

ಬಿಸಿಲಿನ ಬೇಗೆಗೆ ಬಸ್​​ನಲ್ಲಿ ಹೊಗೆ; ಬಚಾವ್ ಆದ ಪ್ರಯಾಣಿಕರು

ಕಲಬುರ್ಗಿಯ ಪರತಾಬಾದ್ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ನಡೆದಿದೆ.
ಕಲಬುರ್ಗಿಯಿಂದ ಜೇವರ್ಗಿ ಕಡೆಗೆ ಹೊರಟಿದ್ದ ಬಸ್ ನಲ್ಲಿ, ಅತಿಯಾದ ಬಿಸಿಲಿನ ಹಿನ್ನೆಲೆ ಬಸ್ ಹಿಂದಿನ ಟೈಯರ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ಬಸ್ ನ ಹಿಂದೆ ಹೊರಟಿದ್ದ ಬೈಕ್ ಸವಾರರು ಡ್ರೈವರ್ ನ ಗಮನಕ್ಕೆ ವಿಷಯವನ್ನ ತಂದಿದ್ದಾರೆ. ಬಸ್ ನಿಲ್ಲಿಸಿ ನೋಡಿದ ಡ್ರೈವರ್ ಗೆ, ಬಿಸಿಲಿಗೆ ಲೈನರ್ ಗರಮ್ ಆಗಿ ಹೊಗೆ ಕಾಣಿಸಿಕೊಂಡಿದೆ. ಹೊಗೆ ಕಂಡು ಕೆಲ ಕಾಲ  ಪ್ರಯಾಣಿಕರು ಆತಂಕಗೊಂಡಿದ್ದು, ಯಾರು ಆತಂಕ ಪಡಬೇಡಿ ಎಂದು ಡ್ರೈವರ್ ಧೈರ್ಯ ತುಂಬಿದ್ದಾರೆ. ಕೆಲ ಹೊತ್ತು ನಿಲ್ಲಿಸಿ ಲೈನರ್ ತಣ್ಣಗಾದ ನಂತರ ಬಸ್ ತೆಗೆದುಕೊಂಡು ಹೋಗಿದ್ದಾರೆ.

Comments (0)

Your email address will not be published. Required fields are marked *

Back to top button