ರಾಜ್ಯಸುದ್ದಿ

ಅತ್ತೆಯ ಮೇಲೆ ಸೊಸೆಯಿಂದ ಹಲ್ಲೆ!

ಚಿಕ್ಕಬಳ್ಳಾಪುರ : ಅತ್ತೆಯ ಮೇಲೆ ಸೊಸೆಯಿಂದ ಹಲ್ಲೆ ನಡೆದಿವಂತಹ ಘಟನೆ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಪಲ್ಲಿಯಲ್ಲಿ ನಡೆದಿದೆ. ಹಣ್ಣು ಹಣ್ಣು ಮುದುಕಿಯನ್ನು ರಸ್ತೆಯಲ್ಲಿ ಎಳೆದಾಡಿದ ಮಹಿಳೆ
ಸ್ವಲ್ಪವೂ ಕನಿಕರ ಇಲ್ಲದೆ ನಡೆದುಕೊಂಡ ವರ್ತನೆ, ಸಾವಿನಂಚಿನಲ್ಲಿರುವ ವೃದ್ಧೆಗೆ ನೆರವು ನೀಡಿದ ಕಟುಕಿ, ಸ್ವಂತ ಅತ್ತೆಯನ್ನು ಬೀದಿಯಲ್ಲಿ ಎಳೆದಾಡಿ ತಿಪ್ಪೆಗೆ ಬಿಸಾಡಿದ್ದಾಳೆ.

ತುತ್ತು ಹಾಕಿ ಮುತ್ತು ಕೊಟ್ಟು ಮಗನನ್ನು ಹೆತ್ತು ಸೊಸೆ ತಂದ ತಪ್ಪಿಗೆ ಇವತ್ತು ಅತ್ತೆಯಾದವಳು ರಸ್ತೆಗೆ ಬಿದ್ದಿದ್ದಾಳೆ. ಸ್ವಂತ ಅತ್ತೆಯನ್ನ ಕಂಡರೆ ಸೊಸೆಗೆ ಆಗೊಲ್ಲ ಅನ್ನೋ ಲೋಕರೂಡಿ ಮಾತಿಗೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಇಂತಹದೊಂದು ಮನಕಲುಕುವ ಘಟನೆ ನಡೆದುಹೋಗಿದೆ.

ಸ್ವಂತ ಅತ್ತೆಯನ್ನು ಬೀದಿಯಲ್ಲಿ ನಾಯಿಯಂತೆ ಎಳೆದಾಡಿರುವ ಘಟನೆ ಇದು. ಈ ಘಟನೆ ನಡೆದಿರೋದು ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಪಲ್ಲಿಯಲ್ಲಿ. ಅತ್ತೆ ವೆಂಕಟಲಕ್ಷಮ್ಮ ಮೇಲೆ ಸೊಸೆ ಲಕ್ಷೀದೇವಮ್ಮ ಹಲ್ಲೆ ನಡೆಸಿದ್ದು ಮಾನವೀಯತೆ ಇಲ್ಲದಂತೆ ನಡೆದುಕೊಂಡಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತೆ ಸೊಸೆ ನಡುವೆ ಗಲಾಟೆ ನಡೆದಿದೆ.

ಈ ಸಮಯದಲ್ಲಿ ಮುನಿಸಿಕೊಂಡು ಹೊರಗಡೆ ಮಲಗಿದ ಹಣ್ಣು ಹಣ್ಣು ಮುದುಕಿಯನ್ನು ರಸ್ತೆಯಲ್ಲಿ ದರದರನೆ ಎಳೆದು, ಎತ್ತಿ ಬಿಸಾಕಿ, ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಗಾಯಾಳು ಅತ್ತೆ ಈಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಭಂದ ಶಿಡ್ಲಘಟ್ಟ ತಾಲ್ಕೂಕು ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button