ಬೆಂಗಳೂರು : ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ನನ್ನು ಬೆಂಗಳೂರಿನ ಕಮ್ಮನಹಳ್ಳಿಯ ಓಯೋ ಹೋಟೆಲ್‌ನಲ್ಲಿ ಇಂದು ಮೂರು ಗಂಟೆ ಸುಮಾರಿಗೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದಿನೇಶ್ ಮೃತ ರೌಡಿಶೀಟರ್, ಏಳು ಜನ ದುಷ್ಕರ್ಮಿಗಳು ಸೇರಿ ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.