Freedom TV
ಫುಲ್ ಅಲರ್ಟ್ ಆದ ನಮ್ಮ ಮೆಟ್ರೋ

ಬೆಂಗಳೂರು : ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ನಲ್ಲಿ ಯುವಕ ಆತ್ಮಹತ್ಯೆ ಬೆನ್ನಲ್ಲೆ ಮೆಟ್ರೋ ನಿಲ್ದಾಣದಲ್ಲಿ ಬಿಎಂಆರ್ಸಿಲ್ (BMRCL) ಫುಲ್ ಅಲರ್ಟ್ ಆಗಿದೆ. ಮತ್ತೆ ಘಟನೆ ಮರುಕಳಿಸದಂತೆ ಬಿಎಂಆರ್ಸಿಲ್ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೇರಳೆ ಹಾಗೂ ಹಸಿರು ಮಾರ್ಗದ ನಿಲ್ದಾಣಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮೆಟ್ರೋ ಹಳಿಗೆ ಹಾರದಂತೆ ನೋಡಿಕೊಳ್ಳಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆ. ಮೆಟ್ರೋ ಸ್ಟೇಷನ್ ಗಳಲ್ಲಿ ಅಲರ್ಟ್ ಆಗಿರುವಂತೆ ಸಿಬ್ಬಂದಿಗೆ ನಮ್ಮ ಮೆಟ್ರೋ ಎಂ.ಡಿ ಮಹೇಶ್ವರ್ ರಾವ್ ಎಲ್ಲಾ ನಮ್ಮ ಮೆಟ್ರೋ ಸ್ಟೇಷನ್ಗಳಲ್ಲಿ ಹೈ ಅಲರ್ಟ್ ಆಗಿರಲು ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮೆಟ್ರೋ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಆಳವಡಿಕೆ ಮಾಡುವರಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.




