ಕ್ರೈಂ ಸ್ಟೋರಿಸುದ್ದಿ

45 ವರ್ಷದವನಿಗೆ 14 ವರ್ಷದ ಬಾಲಕಿ ಮೇಲೆ ಲವ್​ !

ಉತ್ತರ ಪ್ರದೇಶ :ಬಾಲಕಿಯನ್ನು ಪ್ರೀತಿಸುತ್ತಿದ್ದ 45 ವರ್ಷದ ಭೂಪನೊಬ್ಬ ಆಕೆ ವಿರೋಧಿಸಿದ್ದಕ್ಕೆ ಬಾಂಬ್ ಇಟ್ಟು ಉಡಾಯಿಸಲು ವಿಫಲ ಯತ್ನ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಾಲಕಿಯ ತಾಯಿ ಗೂಡಂಗಡಿಯನ್ನು ನಡೆಸುತ್ತಿದ್ದಾರೆ. ಹುಡುಗಿಯ ಸಹೋದರ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಹುಡುಗಿ ಮತ್ತು ಅವಳ ತಾಯಿ ಆ ಅಂಗಡಿಯಲ್ಲಿ ಕುಳಿತಿದ್ದರು. ಪೆಟ್ರೋಲ್ ಪಂಪ್ ಬಳಿ ಇರುವ ಗೂಡಂಗಡಿಯಲ್ಲಿ ಬಾಲಕಿಯ ತಾಯಿ ಬೀಡಿ, ಸಿಗರೇಟ್, ತಂಬಾಕು ಇತ್ಯಾದಿಗಳನ್ನು ಮಾರಾಟ ಮಾಡುತ್ತಾರೆ. ಆಗಾಗ ಬಾಲಕಿಯೂ ಆ ಅಂಗಡಿಗೆ ಹೋಗುತ್ತಿರುತ್ತಾಳೆ.

ತಾಯಿ ಮತ್ತು ಸಹೋದರನಿಗೆ ಬಾಂಬ್ ಬಗ್ಗೆ ಹುಡುಗಿ ಹೇಳಿದ್ದಾಳೆ. ತಕ್ಷಣ ಆಕೆಯ ಸಹೋದರ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸಮೀಪದ ರಸ್ತೆಗಳನ್ನು ನಿರ್ಬಂಧಿಸಿ ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸಿದಾಗ ಮಾರ್ಬಲ್ ಬಾಕ್ಸ್ ನಲ್ಲಿ ತಂತಿಗಳು ಹೊರಬರುತ್ತಿರುವುದು ಪತ್ತೆಯಾಗಿದೆ. ನಂತರ ಸ್ಕ್ಯಾಡ್ ಮಾರ್ಬಲ್ ಬಾಕ್ಸ್ ಅನ್ನು ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ನಿಷ್ಕ್ರಿಯಗೊಳಿಸಿದ್ದಾರೆ.

ಪೊಲೀಸರು, ಸುತ್ತಮುತ್ತಲಿನ ಕ್ಯಾಮೆರಾಗಳನ್ನು ಪರಿಶೀಲಿಸಿ ಬಾಂಬ್ ಇಟ್ಟವರನ್ನು ಗುರುತಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತನ ಹೆಸರು ಗಯಾಪ್ರಸಾದ್ ಎಂದು ತಿಳಿದು ಬಂದಿದೆ. ಗೂಡಂಗಡಿ ನಡೆಸುವ ಕುಟುಂಬಕ್ಕೆ ಆತ ಪರಿಚಿತನಾಗಿದ್ದಾನೆ. ಅದೇ ಕುಟುಂಬದ 14 ವರ್ಷದ ಹುಡುಗಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಆಕೆ ಒಪ್ಪದ್ದಕ್ಕೆ ಈತ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದ ಎಂದು ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button