bengaluruಕ್ರೈಂ ಸ್ಟೋರಿ

ಮಾಜಿ ಎಸಿ ಶಿವಣ್ಣ ಅಂಡ್ ಟೀಮ್ ನಿಂದ ಸರ್ಕಾರಿ ಜಾಗ ಗುಳುಂ!

AC shivanna Lad mafia in sarjapura

ಬೆಂಗಳೂರು: ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಹಾಗಾಗಿ ಸಿಲಿಕಾನ್ ಸಿಟಿ ಸುತ್ತಮುತ್ತಲ ಬೆಲೆಬಾಳುವ ಸರ್ಕಾರಿ ಭೂಮಿ ಭೂಗಳ್ಳರ ಕಣ್ಣಿಗೆ ಬಿದ್ದಿದೆ.ಸರ್ಜಾಪುರ ಹೋಬಳಿಯ ಚಿಕ್ಕನಾಗಮಂಗಲದಲ್ಲಿ ನಡೆದಿರುವ ಬೃಹತ್ ಭೂ ಹಗರಣವೊಂದನ್ನು ‘ಫ್ರೀಡಂ ಟಿವಿ’ ಇದೀಗ ಬಯಲಿಗೆಳೆದಿದೆ. ಬೆಂಗಳೂರು ದಕ್ಷಿಣ ವಿಭಾಗದ ಮಾಜಿ ಎಸಿ ಶಿವಣ್ಣ ಮತ್ತು ಅವರ ತಂಡ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಹಾ ಮಾಡಿರುವ ಭೂ ಹಗರಣ ಬೆಳಕಿಗೆ ಬಂದಿದೆ.

ಚಿಕ್ಕನಾಗಮಂಗಲ ಭೂ ಹಗರಣದ ಮುಖವಾಡ ಬಟಾಬಯಲು

ಸರ್ಕಾರಿ ಭೂಮಿಗೆ ಸ್ಕೆಚ್, 16 ಎಕರೆ ಜಾಗ 6 ಎಕರೆಗೆ ಇಳಿಕೆ!
ಚಿಕ್ಕನಾಗಮಂಗಲದ ಸರ್ವೆ ನಂಬರ್ ಒಂದರಲ್ಲಿ ಇದ್ದ ಬರೋಬ್ಬರಿ 16 ಎಕರೆ ಸರ್ಕಾರಿ ಜಾಗವನ್ನು ಈ ಭೂ ಮಾಫಿಯಾ ಗ್ಯಾಂಗ್ ಗುಳುಂ ಮಾಡಿ ಕೇವಲ 6 ಎಕರೆಗೆ ಇಳಿಸಿದೆ! ಅಂದರೆ ಸುಮಾರು 10 ಎಕರೆಗೂ ಹೆಚ್ಚು ಬೆಲೆಬಾಳುವ ಸರ್ಕಾರಿ ಸ್ವತ್ತನ್ನು ನಕಲಿ ದಾಖಲೆಗಳ ಮೂಲಕ ಲೂಟಿ ಮಾಡಿದೆ.ಯಾವುದೇ ಗ್ರ್ಯಾಂಟ್ ಕಾಪಿ (ಮಂಜೂರಾತಿ ಪತ್ರ) ಇಲ್ಲದಿದ್ದರೂ,ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ಡರ್‌ಗಳಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ.ಫೋರ್ಜರಿ ದಾಖಲೆಗಳನ್ನು ಬಳಸಿ ಚಿಕ್ಕ ಮುನಿಸ್ವಾಮಿ ಎಂಬುವವರ ಹೆಸರಿನಲ್ಲಿ ಭೂಮಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ.

ಮುನಿಕೃಷ್ಣ & ಶಿವಣ್ಣ ಜುಗಲ್‌ಬಂದಿ

ಮುನಿಕೃಷ್ಣ ಎಂಬ ವ್ಯಕ್ತಿಯ ಜೊತೆ ಕೈಜೋಡಿಸಿ ಮಾಜಿ ಎಸಿ ಶಿವಣ್ಣ ಈ ದಂಧೆಯ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಈ ಹಿಂದೆ ಹೈಕೋರ್ಟ್ ಛೀಮಾರಿ ಹಾಕಿದರೂ ಅಧಿಕಾರಿಗಳ ಭೂದಂಧೆ ಮುಂದುರೆದಿದೆ. ಈ ಅಕ್ರಮದ ಕುರಿತು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ್ದರೂ ಸಹ, ಭಂಡ ಅಧಿಕಾರಿಗಳ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ.ಅಕ್ಕಪಕ್ಕದ ರೈತರಿಗೆ ಬೆದರಿಕೆ ಹಾಕಿ, ಅವರಿಗೆ ಟಾರ್ಚರ್ ಕೊಟ್ಟು ಭೂಮಿಯನ್ನು ಕಿತ್ತುಕೊಳ್ಳುವ ದರ್ಪ ಮುಂದುವರಿದಿದೆ.

ಮಾಜಿ ಎಸಿ ಶಿವಣ್ಣ‘ ಪತ್ತೆಯೇ ಇಲ್ಲ,ಆಸಾಮಿ ಎಸ್ಕೇಪ್!
ಸದ್ಯ ಹತ್ತಾರು ಕೇಸ್‌ಗಳ ಸುಳಿಗೆ ಸಿಲುಕಿರುವ ಮಾಜಿ ಎಸಿ ಶಿವಣ್ಣ ಅವರ ಸುಳಿವೇ ಸಿಗುತ್ತಿಲ್ಲ.ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ನಾಪತ್ತೆಯಾದವರು ಇಲ್ಲಿಯವರೆಗೆ ಪತ್ತೆಯಾಗಿಲ್ಲ.ಡಿಪಿಎಆರ್ (DPAR) ಕಾರ್ಯದರ್ಶಿಗಳ ಬಳಿಯೂ ಇವರ ಬಗ್ಗೆ ಮಾಹಿತಿಯಿಲ್ಲ ಎನ್ನಲಾಗುತ್ತಿದೆ.ಇವರು ರಜೆ ಮೇಲೆ
ತೆರಳಿದ್ದಾರೆಯೇ ಅಥವಾ ಓಡಿಹೋಗಿದ್ದಾರೆಯೇ ಅಥವಾ ಬಂಧನ ಭೀತಿಯಿಂದ ಮೆಡಿಕಲ್ ಲೀವ್ ನಾಟಕ ಆಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಈಗ ದಟ್ಟವಾಗಿದೆ.

ದಂಧೆಕೋರರಿಗೆ ಶುರುವಾಯ್ತು ನಡುಕ!
ಫ್ರೀಡಂ ಟಿವಿ ಈ ಹಗರಣವನ್ನು ಬಯಲು ಮಾಡುತ್ತಿದ್ದಂತೆಯೇ ಭೂ ದಂಧೆಕೋರರ ಎದೆಯಲ್ಲಿ ನಡುಕ ಶುರುವಾಗಿದೆ. ಸರ್ಕಾರಿ ಸ್ವತ್ತನ್ನು ಕಬಳಿಸಿ ಕೋಟಿ ಕೋಟಿ ಲೂಟಿ ಹೊಡೆದ ಈ ಕಿಲಾಡಿ ಅಧಿಕಾರಿ ಮತ್ತು ಅವರ ತಂಡದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆಯೇ ಕಾದು ನೋಡಬೇಕಿದೆ.

#LandScam #Chikkanagamangala #ACShivanna #BengaluruLandMafia #FreedomTVExclusive #CorruptionExposed #GovernmentLand #Sarjapura #BengaluruSouth #BreakingNews #InvestigationReport

Comments (0)

Your email address will not be published. Required fields are marked *

Back to top button