ಚೀನಾ ಕಲ್ಲಿದ್ದಲು ಗಣಿ ಸ್ಫೋಟ- 82 ಸಾವು, ಗಾಯಾಳುಗಳಿಗೆ ಹುಡುಕಾಟ!
Mine blast in china 82 died some of them injured

ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 82 ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ನಡೆದ ಅತಿ ದೊಡ್ಡ ಕೈಗಾರಿಕಾ ವಿಪತ್ತುಗಳಲ್ಲಿ ಇದು ಒಂದಾಗಿದೆ.247 ಕಾರ್ಮಿಕರು ನೆಲದಡಿಯಲ್ಲಿದ್ದಾಗ ಸಂಭವಿಸಿದ ದುರಂತ ಇದಾಗಿದ್ದು, ಉತ್ತರ ಚೀನಾದ ಕಲ್ಲಿದ್ದಲು ಗಣಿಗಾರಿಕಾ ರಾಜಧಾನಿ ಎಂದೇ ಕರೆಯಲ್ಪಡುವ ಶಾಂಕ್ಸಿ ಪ್ರಾಂತ್ಯದ ‘ಲಿಯುಶೆನ್ಯು’ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ 7:29 ರ ಸುಮಾರಿಗೆ ಈ ಭೀಕರ ಇಂಗಾಲದ ಮಾನಾಕ್ಸೈಡ್ ಅನಿಲ ಸ್ಫೋಟ ಸಂಭವಿಸಿದೆ.

ಅಪಘಾತದ ಸಮಯದಲ್ಲಿ ಗಣಿಯ ಒಳಗೆ ಒಟ್ಟು 247 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಗಣಿಯೊಳಗೆ ವಿಷಗಾಳಿ ತುಂಬಿಕೊಂಡಿದ್ದರಿಂದ ಉಸಿರುಗಟ್ಟಿ ಹಾಗೂ ಗಾಯಗೊಂಡು ಹಲವರು ಸಾವನ್ನಪ್ಪಿದ್ದಾರೆ. ಶನಿವಾರ ಮುಂಜಾನೆಯ ವೇಳೆಗೆ ರಕ್ಷಣಾ ಸಿಬ್ಬಂದಿ 201 ಕಾರ್ಮಿಕರನ್ನು ಯಶಸ್ವಿಯಾಗಿ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
82 ಶವಗಳು ಪತ್ತೆ-ಇನ್ನು 9 ನೌಕರರಿಗಾಗಿ ತಲಾಶ್!
ವರದಿಗಳ ಪ್ರಕಾರ ಘಟನೆಯಲ್ಲಿ 82 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಗಣಿಯ ಆಳದಲ್ಲಿ ಸಿಲುಕಿಕೊಂಡಿರುವ ಇನ್ನುಳಿದ 9 ಕಾರ್ಮಿಕರಿಗಾಗಿ ಹೆಲ್ಮೆಟ್ ಧರಿಸಿದ ನೂರಾರು ರಕ್ಷಣಾ ಕಾರ್ಯಕರ್ತರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ರಾಜ್ಯ ಸಾರ್ವಜನಿಕ ದೂರದರ್ಶನ (CCTV) ಬಿಡುಗಡೆ ಮಾಡಿರುವ ದೃಶ್ಯಗಳಲ್ಲಿ ಗಣಿ ಪ್ರದೇಶದ ಸುತ್ತ ಹತ್ತಾರು ಆಂಬ್ಯುಲೆನ್ಸ್‌ಗಳು ಸಾಲಾಗಿ ನಿಂತಿರುವುದು ಹಾಗೂ ಗಾಯಾಳುಗಳನ್ನು ಸ್ಟ್ರೆಚರ್‌ಗಳ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಂತಾಪ ತನಿಖೆಗೆ ಆದೇಶ!
ದುರಂತದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಗಾಯಾಳುಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವಂತೆ ಮತ್ತು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.”ಈ ಭೀಕರ ಅಪಘಾತದಿಂದ ಕಠಿಣ ಪಾಠಗಳನ್ನು ಕಲಿಯಬೇಕಿದೆ. ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳ ಬಗ್ಗೆ ಅಧಿಕಾರಿಗಳು ನಿರಂತರ ಜಾಗರೂಕರಾಗಿರಬೇಕು. ಇಂತಹ ದುರಂತ ಅಪಘಾತಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಡಿಲ ಸುರಕ್ಷತಾ ನಿಯಮಗಳೇ ದುರಂತಕ್ಕೆ ಕಾರಣ
ಚೀನಾದ ಅತ್ಯಂತ ಬಡ ಪ್ರಾಂತ್ಯಗಳಲ್ಲಿ ಒಂದಾದ ಶಾಂಕ್ಸಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ದೊಡ್ಡ ಉದ್ಯಮ. ಕಳೆದ ಕೆಲವು ದಶಕಗಳಲ್ಲಿ ಚೀನಾ ಗಣಿ ಸುರಕ್ಷತೆಯನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಸ್ಥಳೀಯ ಮಟ್ಟದಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳು ಸಡಿಲವಾಗಿರುವುದು ಮತ್ತು ನಿಯಮಗಳ ಸ್ಪಷ್ಟತೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
#FreedomTV #China #ChinaMineExplosion #ShanxiProvince #LiushenyuCoalMine #IndustrialDisaster #XiJinping #RescueOperation #CoalMineBlast #GlobalNews #BreakingNews




