ಚಾಮುಂಡೇಶ್ವರಿ ಜೆಡಿಎಸ್ ಸಮಾವೇಶ-GTD ವಿರುದ್ಧ ಸಾರಾ ಮಹೇಶ್ ಕಿಡಿ!
Sara Mahesh critisizes GTD and JDS programme at Chamundeshwari Constituency

ಮೈಸೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ನಾಳೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಯೋಜಿಸಿರುವ ಜನತಾದಳ ಸಮಾವೇಶವು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಶಾಸಕ ಜಿ.ಟಿ. ದೇವೇಗೌಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುವ ಮೂಲಕ ಪಕ್ಷದೊಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಚಾಮುಂಡೇಶ್ವರಿ ಜೆಡಿಎಸ್‌ನ ಸುಭದ್ರ ಕೋಟೆ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಾ ಮಹೇಶ್, “ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಗಾಗಿ ಕುಮಾರಣ್ಣ 2006 ರಿಂದಲೂ ಶ್ರಮಿಸಿದ್ದಾರೆ.ಈ ಬಾರಿ ಮೈಸೂರು ಜಿಲ್ಲೆಯ ಜೆಡಿಎಸ್ ಕಾರ್ಯಕ್ರಮವನ್ನು ಇಲ್ಲಿಯೇ ಮಾಡಬೇಕೆಂದು ನಾವು ಮನವಿ ಮಾಡಿದ್ದೆವು.ಬೇಡಿಕೆಯಂತೆ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು, 35 ರಿಂದ 40 ಸಾವಿರ ಜನ ಸೇರುವ ನಿರೀಕ್ಷೆಯಿದೆ.ಈ ಮೂಲಕ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್‌ನ ಸುಭದ್ರ ಕೋಟೆ ಎಂಬ ಸಂದೇಶ ನೀಡಲಾಗುವುದು” ಎಂದು ಹೇಳಿದರು.
ಜಿ.ಟಿ.ಡಿ ವಿರುದ್ಧ ‘ಸಾರಾ’ ಕಿಡಿ- ತಪ್ಪು ತಿದ್ದುಕೊಂಡು ಬನ್ನಿ ಎಂದ ಮಾಜಿ ಸಚಿವ!
ಜಿ.ಟಿ. ದೇವೇಗೌಡರ ಇತ್ತೀಚಿನ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಾರಾ ಮಹೇಶ್ “ಇಷ್ಟು ದಿನ ಜಿ.ಟಿ.ಡಿ ಏಕೈಕ ನಾಯಕರು ಎಂದು ಎಲ್ಲರೂ ನಂಬಿದ್ದರು. ಆದರೆ ಉಪಚುನಾವಣೆ, ವಿಧಾನಸಭೆ, ಪಾಲಿಕೆ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಅವರು ತೆಗೆದುಕೊಂಡ ವಿಭಿನ್ನ ತೀರ್ಮಾನಗಳು ನೀತಿ ನಿಲುವುಗಳು ಕಾರ್ಯಕರ್ತರಿಗೆ ನೋವು ತಂದಿವೆ. ಇದು ಯಾರ ಮನೆಯ ಶುಭ ಕಾರ್ಯವೂ ಅಲ್ಲ. ಇದು ಪಕ್ಷದ ಕೆಲಸ. “ಜಿಟಿಡಿ ಅವಕಾಶವಾದಿ ರಾಜಕಾರಣ ಬಿಡಬೇಕು” ಎಂದು ಗುಡುಗಿದರು.
ಜಿಟಿಡಿ ಏಕಾಂಗಿ!
ನಿನ್ನೆ ಜಿಟಿಡಿ ದೇವೇಗೌಡರನ್ನು ಭೇಟಿ ಮಾಡಲು ಹೋದಾಗ ಚಾಮುಂಡೇಶ್ವರಿ ಕ್ಷೇತ್ರದ ಒಬ್ಬೇ ಒಬ್ಬ ಮುಖಂಡರೂ ಜೊತೆಯಲ್ಲಿ ಇರಲಿಲ್ಲ.ವಿಧಿಯಿಲ್ಲದೆ ಬೇರೆ ಕ್ಷೇತ್ರದವರನ್ನು ಕರೆದುಕೊಂಡು ಹೋಗಿದ್ದಾರೆ. ಕುಮಾರಣ್ಣ ಈಗಾಗಲೇ ಜಿ.ಟಿ.ಡಿ ನಮ್ಮ ಜೊತೆ ಇಲ್ಲ ಎಂದು ಜಿ.ಟಿ.ಡಿ ನಮ್ಮ ಜೊತೆ ಇಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಅವರು ತಪ್ಪು ತಿದ್ದುಕೊಂಡು ಬಂದರೆ, ನಮ್ಮ ನಾಯಕರು ಒಪ್ಪಿದರೆ ನಮ್ಮದೇನು ಅಭ್ಯಂತರವಿಲ್ಲ,” ಎಂದು ಸಾರಾ ಮಹೇಶ್ ಮಾರ್ಮಿಕವಾಗಿ ಹೇಳಿದರು.
ಜೆಡಿಎಸ್ ಎಲ್ಲಿದೆ ಎನ್ನುವವರಿಗೆ ನಾಳೆ ಉತ್ತರ ಸಿಗಲಿದೆ- ಜಿ.ಡಿ. ಹರೀಶ್ ಗೌಡ
ಇದೇ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, “ನಾಳೆಯ ಕಾರ್ಯಕ್ರಮಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಪ್ರಶ್ನಿಸುವವರಿಗೆ ನಾಳೆಯ ಕಾರ್ಯಕ್ರಮದ ಮೂಲಕ ದಿಟ್ಟ ಉತ್ತರ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
#FreedomTV #JDS #MysuruNews #ChamundeshwariField #HDKumaraswamy #SaRaMahesh #GDHarishGowda #GTDevegowda #KarnatakaPolitics #JDSMysuru #DevegowdaBirthday #RegionalPartyStrength #ಮೈಸೂರು #ಜೆಡಿಎಸ್ #ಕುಮಾರಸ್ವಾಮಿ #ಸಾರಾಮಹೇಶ್



