Tamil nadu

ಕಾವೇರಿ, ಮೇಕೆದಾಟು ವಿವಾದ ಬೇಡ- ವಿಜಯ್ ಖಡಕ್ ವಾರ್ನಿಂಗ್!

CM Vijay Meet on Water issue-cauvery and Mekedatu

ಚೆನ್ನೈ: ಬಹುಕಾಲದ ವಿವಾದಿತ ಕಾವೇರಿ ನದಿ ನೀರು ಹಂಚಿಕೆ ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನ ನೂತನ ಸಿಎಂ ಜೋಸೆಫ್ ವಿಜಯ್ ಅವರು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಾಮರ್ಶನಾ ಸಭೆ ನಡೆಸಿದರು.ಈ ಸಭೆಯಲ್ಲಿ ರಾಜ್ಯದ ಹಿತರಕ್ಷಣೆ ಮತ್ತು ನೆರೆ ರಾಜ್ಯಗಳೊಂದಿಗಿನ ಸಮತೋಲಿತ ಬಾಂಧವ್ಯ ಕಾಪಾಡಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಅನಗತ್ಯ ವಿವಾದ ತಂಟೆ-ತಕರಾರುಗಳಿಗೆ ನಿರ್ಬಂಧ!

ಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, “ಕಾವೇರಿ ಮತ್ತು ಮೇಕೆದಾಟು ನದಿ ನೀರು ಹಂಚಿಕೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅನಾವಶ್ಯಕ ವಿವಾದಗಳನ್ನು ಸೃಷ್ಟಿಸಬಾರದು. ನೆರೆ ರಾಜ್ಯದೊಂದಿಗೆ ವಿನಾಕಾರಣ ಯಾವುದೇ ತಂಟೆ ತಕರಾರುಗಳು ಎದುರಾಗದಂತೆ ಎಚ್ಚರ ವಹಿಸುವುದು ಮುಖ್ಯ. ರಾಜಕೀಯ ಪ್ರೇರಿತ ವಿವಾದಗಳಿಗೆ ಆಸ್ಪದ ನೀಡಬೇಡಿ” ಎಂದು ಅಧಿಕಾರಿಗಳಿಗೆ ಎಚ್ಚರ ನೀಡಿದರು.
“ರೈತರ ಹಿತವೇ ನಮ್ಮ ಆದ್ಯ ಕರ್ತವ್ಯ”
ವಿವಾದಗಳಿಗೆ ಆಸ್ಪದೆ ನೀಡದಂತೆ ತಮಿಳುನಾಡು ರೈತರ ಹಿತಾಸಕ್ತಿ ಕಾಯುವುದು ಮತ್ತು ಅವರ ಬೆಳೆ ಫಸಲನ್ನು ರಕ್ಷಿಸುವುದು ನಮ್ಮೆಲ್ಲರ ಪ್ರಥಮ ಕರ್ತವ್ಯ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.ಕಾವೇರಿ ನದಿ ಪಾತ್ರದ ಡೆಲ್ಟಾ ಪ್ರದೇಶಗಳಲ್ಲಿ ಇರುವ ಬೆಳೆ ಪರಿಸ್ಥಿತಿ ಹಾಗೂ ಜಲಾಶಯಗಳಲ್ಲಿನ ನೀರಿನ ಲಭ್ಯತೆಯ ಕುರಿತು ಹಿರಿಯ ಅಧಿಕಾರಿಗಳಿಂದ ಸಿಎಂ ಸಂಪೂರ್ಣ ಮಾಹಿತಿ ಪಡೆದರು.
ಮೆಟ್ಟೂರು ಡ್ಯಾಂನಿಂದ ನೀರು ಬಿಡುಗಡೆ- ಮುಂಬರುವ ಕುರುವೈ ಬೇಸಾಯ ಹಾಗೂ ಸಾಗುವಳಿಗೆ ಅನುಕೂಲವಾಗುವಂತೆ ಜೂನ್ ಮಧ್ಯಭಾಗದಲ್ಲಿ ಮೆಟ್ಟೂರು ಅಣೆಕಟ್ಟಿನಿಂದ ನೀರು ಬಿಡುವ ಕುರಿತು ಸಭೆಯಲ್ಲಿ ತಾಂತ್ರಿಕ ಲೆಕ್ಕಾಚಾರಗಳನ್ನು ಪರಾಮರ್ಶಿಸಲಾಯಿತು.

ಸುಪ್ರೀಂ ಕೋರ್ಟ್ ವ್ಯಾಜ್ಯದ ಪರಿಶೀಲನೆ
ದಶಕಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರವು ಕರ್ನಾಟಕ ಮತ್ತು ತಮಿಳುನಾಡು ನಡುವೆ ತೀವ್ರ ರಾಜಕೀಯ ಹಾಗೂ ಭಾವನಾತ್ಮಕ ವಿವಾದಕ್ಕೆ ಕಾರಣವಾಗಿದೆ. ಆದರೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು ‘ಅನಾವಶ್ಯಕ ವಿವಾದ ಬೇಡ’ ಎಂದು ಹೇಳಿರುವುದು ಸೌಹಾರ್ದತೆಗೆ ದಿಕ್ಸೂಚಿಯಂತೆ ತೋರುತ್ತಿದ್ದು ತಮಿಳುನಾಡಿನಲ್ಲೆಡೆ ಕುತೂಹಲಕ್ಕೆ ಗ್ರಾಸವಾಗಿದೆ.ರೈತರ ಹಿತ ಕಾಯುವ ನೆಪದಲ್ಲಿ ತಮಿಳುನಾಡಿನ ಹಿಂದಿನ ಸರ್ಕಾರಗಳು ಅನಗತ್ಯವಾಗಿ ಹಠ ಹಿಡಿಯುತ್ತಿದ್ದ ಇತಿಹಾಸವಿದೆ. ಆದರೆ ಹೊಸ ಮುಖ್ಯಮಂತ್ರಿಗಳ ಈ ಪ್ರಬುದ್ಧ ನಿಲುವು ಎರಡೂ ರಾಜ್ಯಗಳ ನಡುವಿನ ಜಲವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ದಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

#MekedatuProject #CauveryWaterDispute #CMJosephVijay #TamilNaduPolitics #MetturDam #KarnatakaNews #FarmersWelfare #WaterSharing #FreedomTVNews #BreakingNewsKannada #VijayCM

Comments (0)

Your email address will not be published. Required fields are marked *

Back to top button