Kalburgiಕ್ರೈಂ ಸ್ಟೋರಿ

ಕಲಬುರಗಿಯಲ್ಲಿ 327 ರೌಡಿಗಳಿಗೆ ಪರೇಡ್ ಮಾಡಿಸಿದ ಕಮಿಷನರ್!

Rowdysheeters Parade by Commissioner in Kalaburagi

ಕಲಬುರಗಿ: ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಇಂದು ರೌಡಿಶೀಟರ್‌ಗಳಿಗೆ ಅಕ್ಷರಸಃ ಸಿಂಹಸ್ವಪ್ನವಾದರು. ನಗರದ ಸಿ.ಎ.ಆರ್ (CAR) ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ರೌಡಿ ಪರೇಡ್‌ನಲ್ಲಿ ಸುಮಾರು 327 ರೌಡಿಗಳಿಗೆ ಆಯುಕ್ತರು ಬೆವರಿಳಿಸಿದ್ದಾರೆ.

ಬೆಳ್ಳಂಬೆಳಗ್ಗೆ ರೌಡಿ ಪಟಾಲಂಗೆ ಬೆವರಿಳಿಸಿದ ಆಯುಕ್ತರು


ನಗರದ ಆರ್.ಜಿ ನಗರ, ಅಶೋಕ್ ನಗರ, ಚೌಕ್, ವಿವಿ ಠಾಣೆ ಹಾಗೂ ಫರಹತಾಬಾದ್ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಡಿಯಲ್ಲಿರುವ ರೌಡಿಶೀಟರ್‌ಗಳನ್ನು ಮೈದಾನದಲ್ಲಿ ಸಾಲುಗಟ್ಟಿ ನಿಲ್ಲಿಸಲಾಗಿತ್ತು. ಪ್ರತಿಯೊಬ್ಬನ ಹಿನ್ನೆಲೆ ಮತ್ತು ಪ್ರಸ್ತುತ ಚಟುವಟಿಕೆಗಳ ಬಗ್ಗೆ ಆಯುಕ್ತರು ಖುದ್ದಾಗಿ ವಿಚಾರಣೆ ನಡೆಸಿದರು.ಪರೇಡ್‌ನಲ್ಲಿದ್ದ ಒಬ್ಬ ಯುವಕನಿಗೆ “ಏನೋ ನೀನು ಸ್ಟೂಡೆಂಟ್ ಅಂತೆ,ಎಷ್ಟು ಕೇಸ್‌ಗಳಿವೆ?” ಎಂದು ಆಯುಕ್ತರು ಪ್ರಶ್ನಿಸಿದರು. ಅದಕ್ಕೆ ಆತ “ನಾಲ್ಕು ಕೇಸ್‌ಗಳಿವೆ ಸರ್” ಎಂದಾಗ, ಆಯುಕ್ತರು ಅವನಿಗೆ ಬುದ್ಧಿವಾದ ಹೇಳುತ್ತಲೇ ಖಡಕ್ ಎಚ್ಚರಿಕೆ ನೀಡಿದರು.ಹಲವಾರು ರೌಡಿಗಳು ಆಯು್ತಕರು ನೀಡುವ ಚುರುಕಾದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಾಚಿಕೆಯಿಂದ ತಲೆ ತಗ್ಗಿಸಿ ನಿಂತಿದ್ದರು.

ಬಿಸಿಲ ತಾಪಕ್ಕೆ ಕುಸಿದು ಬಿದ್ದ ರೌಡಿ!
ಪರೇಡ್ ನಡೆಯುತ್ತಿದ್ದ ಸಂದರ್ಭದಲ್ಲಿ ನಾಟಕೀಯ ಘಟನೆಯೊಂದು ಸಂಭವಿಸಿತು.ಆಯುಕ್ತರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾಗಲೇ ರೌಡಿಯೊಬ್ಬ ಬಿಸಿಲಿನ ತಾಪಮಾನ ಮತ್ತು ಪಿಟ್ಸ್ (ಮೂರ್ಛೆ ರೋಗ) ಸಮಸ್ಯೆಯಿಂದಾಗಿ ಸ್ಥಳದಲ್ಲೇ ಕುಸಿದು ಬಿದ್ದನು. ಕೂಡಲೇ ಎಚ್ಚೆತ್ತ ಪೊಲೀಸರು ಆತನ ನೆರವಿಗೆ ಧಾವಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ನಗರದಲ್ಲಿ ಅಶಾಂತಿ ಸೃಷ್ಟಿಸಿದರೆ ಜೈಲೂಟ ಗ್ಯಾರಂಟಿ!
“ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಸಾರ್ವಜನಿಕರಿಗೆ ತೊಂದರೆ ನೀಡುವ ಅಥವಾ ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಗ್ಯಾರಂಟಿ,” ಎಂದು ಡಾ. ಶರಣಪ್ಪ ಎಸ್.ಡಿ. ರೌಡಿಗಳಿಗೆ ಎಚ್ಚರಿಕೆ ನೀಡಿದರು. ಈ ಪರೇಡ್ ಮೂಲಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳಿಗ ಕಮೀಷನರ್ ಪರೋಕ್ಷವಾಗಿ ಸಿಂಹಸ್ವಪ್ನವಾಗಿ ಕಾಡಿದರು.ಈ ಬೃಹತ್ ಪರೇಡ್‌ನಲ್ಲಿ ನಗರದ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಆಯುಕ್ತರಿಗೆ ಸಾಥ್ ನೀಡಿದರು.

#FreedomTV #KalaburagiPolice #RowdyParade #DrSharanappaSD #LawAndOrder #CrimeNewsKannada #KalaburagiCity #PoliceAction #RowdySheeters #KarnatakaPolice #ಕಲಬುರಗಿ #ಪೊಲೀಸ್ಪರೇಡ್ #ರೌಡಿಶೀಟರ್ #ಶಾಂತಿಪಾಲನೆ #ಖಡಕ್ಎಚ್ಚರಿಕೆ

Comments (0)

Your email address will not be published. Required fields are marked *

Back to top button