ಅಭಿಷೇಕ್ ಅಪಾರ ಸಂಪತ್ತು-ದೀದಿ ಅಳಿಯನಿಗೆ ಜೈಲೂಟ ಗ್ಯಾರಂಟಿ!
illegal properties of abhishek banerjee and other tmc leaders will be taken over by govt- suvendu Adhikari

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ ಮತ್ತು ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ.

ಭವಾನಿಪುರದಲ್ಲಿ ನಡೆದ ಬೃಹತ್ ಕೃತಜ್ಞತಾ ಸಭೆಯಲ್ಲಿ ಬಹಿರಂಗವಾಗಿ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಆಪ್ತರ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳ ಪಟ್ಟಿಯನ್ನೇ ಜನರ ಮುಂದಿಟ್ಟಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಐಷಾರಾಮಿ ನಿವಾಸಕ್ಕೆ ಕೆಎಂಸಿ ನೋಟಿಸು
ಬಿಜೆಪಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ವಿಶೇಷ ತಂಡವು ಕಣಕ್ಕಿಳಿದಿದೆ. ಕೋಲ್ಕತ್ತಾದ ಹರೀಶ್ ಮುಖರ್ಜಿ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ಐಷಾರಾಮಿ ನಿವಾಸ ‘ಶಾಂತಿನಿಕೇತನ’ಕ್ಕೆ ತೆರಳಿದ ಅಧಿಕಾರಿಗಳು, ಕೆಎಂಸಿ ಕಾಯ್ದೆ 1980ರ ಸೆಕ್ಷನ್ 401 ರಡಿಯಲ್ಲಿ ಕಟ್ಟಡದ ಗೋಡೆಗೆ ನೋಟಿಸು ಅಂಟಿಸಿದ್ದಾರೆ. ಯಾವುದೇ ಅಧಿಕೃತ ಅನುಮೋದಿತ ನಕ್ಷೆ ಇಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಆರೋಪ ಇದ್ದು, ಕಟ್ಟಡ ಒಡೆಯುವ (Demolition) ಪ್ರಕ್ರಿಯೆ ಜರುಗಿಸಲಾಗುವುದು ಎನ್ನಲಾಗುತ್ತಿದೆ.
24 ಪ್ರಮುಖ ಆಸ್ತಿಗಳ ದಾಖಲೆ ಬಹಿರಂಗ!
“ಬಂಗಾಳವನ್ನು ಲೂಟಿ ಮಾಡಿ ಕಳ್ಳಮಾರ್ಗದಲ್ಲಿ ಇವರು ಎಸ್ಟೇಟ್‌ಗಳನ್ನು ನಿರ್ಮಿಸಿದ್ದಾರೆ. ಇದು ಜನರಿಗೆ ತಿಳಿಯಬೇಕು” ಎಂದು ಗುಡುಗಿದ ಸಿಎಂ ಸುವೇಂದು ಅಧಿಕಾರಿ, ಮುನ್ಸಿಪಲ್ ಕಾರ್ಪೊರೇಷನ್ ಆಂತರಿಕ ತನಿಖೆಯಲ್ಲಿ ಪತ್ತೆಯಾಗಿರುವ ಆಸ್ತಿಗಳ ವಿವರ ನೀಡಿದರು.14 ಅತ್ಯಮೂಲ್ಯ ಆಸ್ತಿಗಳು ಅಭಿಷೇಕ್ ಬ್ಯಾನರ್ಜಿ ನೇರ ಸಂಪರ್ಕ ಹೊಂದಿರುವ ‘ಲೀಪ್ಸ್ ಅಂಡ್ ಬೌಂಡ್ಸ್’ (Leaps and Bounds) ಕಂಪನಿ ಹೆಸರಿನಲ್ಲಿದೆ. 4 ಆಸ್ತಿಗಳು ಅಭಿಷೇಕ್ ಬ್ಯಾನರ್ಜಿ ಹೆಸರಿನಲ್ಲಿದೆ ಹಾಗೂ 6 ಆಸ್ತಿಗಳು ಅವರ ತಂದೆಯ ಹೆಸರಿನಲ್ಲಿ ದಾಖಲಾಗಿವೆ ಎಂದರು. ಸದ್ಯ ಒಟ್ಟು 42 ಆಸ್ತಿಗಳನ್ನು ಪ್ರಾಥಮಿಕವಾಗಿ ಗುರುತಿಸಲಾಗಿದ್ದು, ಈ ಆಸ್ತಿಗಳಿಂದ ತೆರಿಗೆ ವಂಚಿಸಿರುವ ಹಾಗೂ ಕಾನೂನುಬಾಹಿರ ಆಸ್ತಿ ಗಳಿಕೆ ಕುರಿತು ತನಿಖೆ ಚುರುಕುಗೊಂಡಿದೆ.
3 ಟಿಎಂಸಿ ನಾಯಕರ ಬೇನಾಮಿ ಆಸ್ತಿ ಪತ್ತೆ – ಇಡಿ ಜಾಲಕ್ಕೆ ಬಿದ್ದ ಸೋನಾ ಪಪ್ಪು!
ಅಭಿಷೇಕ್ ಬ್ಯಾನರ್ಜಿ ಮಾತ್ರವಲ್ಲದೆ ಅವರ ನಿಕಟವರ್ತಿಗಳ ಸಂಪತ್ತಿನ ಹೂರಣವನ್ನೂ ಸಿಎಂ ಬಯಲಿಗೆಳೆದಿದ್ದಾರೆ.ರಾಜು ನಾಸ್ಕರ್ ,ಬೆಲಿಯಾಘಾಟಾ ಟಿಎಂಸಿ ನಾಯಕ- ಈತನಿಗೆ ಸೇರಿದ 18 ಬೇನಾಮಿ ಆಸ್ತಿಗಳು ಪತ್ತೆಯಾಗಿದ್ದು,ಈತ ಸದ್ಯ ಬೇರೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ.ಬಿಸ್ವಜಿತ್ ಪೊದ್ದಾರ್ ಅಲಿಯಾಸ್ ಸೋನಾ ಪಪ್ಪು ಕಸ್ಬಾ ಪ್ರಭಾವಿ ನಾಯಕ- ಈತನ ಹೆಸರಿನಲ್ಲಿ 24 ಐಷಾರಾಮಿ ಆಸ್ತಿಗಳ ದಾಖಲೆ ಸಿಕ್ಕಿದ್ದು, ಸಿಎಂ ಈ ಮಾಹಿತಿ ಬಿಚ್ಚಿಟ್ಟ ಕೆಲವೇ ಗಂಟೆಗಳಲ್ಲಿ ಜಾರಿ ನಿರ್ದೇಶನಾಲಯ (ED) ಸೋನಾ ಪಪ್ಪುನನ್ನು ಬಂಧಿಸಿದೆ.ಜಾವೇದ್ ಅಹ್ಮದ್ ಖಾನ್ ಈತನ ಪುತ್ರನ ಹೆಸರೊಂದರಲ್ಲೇ ಬರೋಬ್ಬರಿ 90 ಅಕ್ರಮ ಆಸ್ತಿಗಳು ಪತ್ತೆಯಾಗಿವೆ.
“ಕಾನೂನಿನ ಚೌಕಟ್ಟಿನಲ್ಲೇ ಪ್ರತಿಯೊಬ್ಬ ಭ್ರಷ್ಟನನ್ನು ಜೈಲಿಗೆ ಅಟ್ಟುತ್ತೇವೆ” ಎಂದು ಸುವೇಂದು ಅಧಿಕಾರಿ ಗುಡುಗಿದ್ದಾರೆ.vಇದರಿಂದ ಟಿಎಂಸಿ ಪಾಳಯದಲ್ಲಿ ನಡುಕ ಹುಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಷೇಕ್ ಬ್ಯಾನರ್ಜಿ, “ಇದು ಬಿಜೆಪಿಯ ರಾಜಕೀಯ ದ್ವೇಷದ ಪರಮಾವಧಿ, ನನ್ನ ಮನೆ ಕೆಡವಿದರೂ ನಾನು ಮಂಡಿಯೂರುವುದಿಲ್ಲ,ಹೋರಾಟ ಮುಂದುವರಿಯುತ್ತದೆ” ಎಂದು ಸವಾಲು ಹಾಕಿದ್ದಾರೆ.
#WestBengalPolitics #SuvenduAdhikari #Abhishek Banerjee #TMC #BJPWestBengal #CorruptionCrackdown #KMCNotice #EDArrest #SonaPappu #MamataBanerjee #BenamiProperty #FreedomTV #BreakingNews




