ಕ್ರೈಂ ಸ್ಟೋರಿ

ಸೂಟ್​ಕೇಸ್​ನಲ್ಲಿ ಹೆಂಡ್ತಿ ಶವ; ಪುಣೆಯಲ್ಲಿ ರಾಕೇಶ್ ಅರೆಸ್ಟ್​

ಬೆಂಗಳೂರು: ಹುಳಿಮಾವು ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೃತ್ಯವೊಂದು ನಡೆದು ಹೋಗಿದೆ. ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ತನ್ನ ಪತ್ನಿಯನ್ನೆ ಕೊಲೆ ಮಾಡಿ ಸೂಟ್​ ಕೇಸ್​ಗೆ ತುಂಬಿ ಪರಾರಿಯಾಗಿರುವ ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ರಾಕೇಶ್ ಕೊಲೆ ಮಾಡಿದ ಪಾಪಿ. ಪತ್ನಿ ಗೌರಿ ಅನಿಲ್ ಸಾಂಬೇಕರ್​​ ಜೊತೆ ಜಗಳವಾಗಿ ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್​ಗೆ ತುಂಬಿ, ಬಳಿಕ ಪತ್ನಿಯ ಪೋಷಕರಿಗೆ ಫೋನ್ ಮಾಡಿ ತಿಳಿಸಿದ್ದಾನೆ ಭೂಪ.

ರಾಕೇಶ್ ಫೋನ್ ಬಳಿಕ ಗಾಭರಿಯಾದ ಗೌರಿ ಮನೆಯವರು ಕೂಡಲೇ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ಹುಳಿಮಾವು ಪೊಲೀಸರು ದೊಡ್ಡ ಕಮ್ಮನಹಳ್ಳಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಸಾರಾ ಫಾತಿಮಾ ಅವರ ತಂಡ ಘಟನೆಯ ತನಿಖೆ ಕೈಗೊಂಡಿದ್ದಾರೆ. ಈ ವೇಳೆ ವಾಷ್​ ರೂಮ್​ನಲ್ಲಿ ಸೂಟ್​ ಕೇಸ್​ ಪತ್ತೆಯಾಗಿದ್ದು. ರಾಕೇಶ್​ನ್ನನ ಬೆನ್ನತ್ತಿದ ಪೋಲಿಸರು ಪುಣೆಯಲ್ಲಿ ಆತನನ್ನು ಅರೆಸ್ಟ್​ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button