
ಸ್ಯಾಂಡಲ್ ವುಡ್‌ನ ಎವರ್ ಗ್ರೀನ್ ಬ್ಯೂಟಿ ಮತ್ತು ಅಭಿಮಾನಿಗಳ ಪ್ರೀತಿಯ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಈ ಬಾರಿ ಬೇಸಿಗೆಯ ರಜೆಯನ್ನು ಕಳೆಯಲು ಪ್ರಕೃತಿಯ ಮಡಿಲನ್ನು ಆಯ್ದುಕೊಂಡಿದ್ದಾರೆ. ರಣಬಿಸಿಲಿನಿಂದ ದೂರವಿರಲು ತಮ್ಮ ಮುದ್ದಿನ ಮಕ್ಕಳಾದ ಆಯ್ರಾ ಮತ್ತು ಯಥರ್ವ್ ಜೊತೆಗೂಡಿ ಕೊಡಗಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಮಡಿಕೇರಿಯ ಹಸಿರು ತುಂಬಿದ ಬೆಟ್ಟಗುಡ್ಡಗಳು, ಕಾಫಿ ತೋಟಗಳು ಮತ್ತು ಸರೋವರಗಳ ನಡುವೆ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ರಾಧಿಕಾ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ “ಕೂರ್ಗ್, ಯೂ ಬ್ಯೂಟಿ” ಎಂಬ ಕ್ಯಾಪ್ಷನ್‌ನೊಂದಿಗೆ ಮಕ್ಕಳ ಕೈಹಿಡಿದು ವಾಕ್ ಮಾಡುತ್ತಿರುವ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸದ್ಯ ತಮ್ಮ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ, ಅಮ್ಮ ರಾಧಿಕಾ ಪಂಡಿತ್ ಮಾತ್ರ ಮಕ್ಕಳ ಸಮ್ಮರ್ ವೆಕೇಶನ್ ಮಿಸ್ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಸಮುದ್ರ ತೀರದಲ್ಲಿ ರಜೆ ಕಳೆದಿದ್ದ ಈ ಪುಟಾಣಿಗಳು, ಈ ಬಾರಿ ಕೊಡಗಿನ ರೆಸಾರ್ಟ್‌ವೊಂದರಲ್ಲಿ ಪ್ರಕೃತಿಯನ್ನು ಹತ್ತಿರದಿಂದ ಆಸ್ವಾದಿಸುತ್ತಿದ್ದಾರೆ. ನಟಿ ರಾಧಿಕಾ ತಮ್ಮ ಮಕ್ಕಳಿಗೆ ಪ್ರಕೃತಿಯ ಮಹತ್ವವನ್ನು ಪರಿಚಯಿಸುತ್ತಾ, ಮೈಂಡ್ ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಈ ಸುಂದರ ಕ್ಷಣಗಳ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಇನ್ನು 42ನೇ ವಯಸ್ಸಿನಲ್ಲೂ ರಾಧಿಕಾ ಪಂಡಿತ್ ಅವರು ತಮ್ಮ ಸೌಂದರ್ಯ ಮತ್ತು ಫಿಟ್ನೆಸ್‌ನಿಂದ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಈ ಪ್ರವಾಸದಲ್ಲಿ ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ಅತ್ಯಂತ ಕ್ಯೂಟ್ ಆಗಿ ಕಾಣಿಸಿಕೊಂಡಿರುವ ನಟಿಯನ್ನು ನೋಡಿ ಅಭಿಮಾನಿಗಳು “ರಾಕಿಂಗ್ ಕ್ವೀನ್” ಎಂದು ಕೊಂಡಾಡುತ್ತಿದ್ದಾರೆ. “ನಿಮ್ಮ ವಯಸ್ಸು ಹಿಂದಕ್ಕೆ ಸಾಗುತ್ತಿದೆ, ಇಷ್ಟು ಸುಂದರವಾಗಿ ಕಾಣಲು ಹೇಗೆ ಸಾಧ್ಯ?” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಅವರ ಸಿಂಪ್ಲಿಸಿಟಿಗೆ ಫಿದಾ ಆಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಮಕ್ಕಳೊಂದಿಗೆ ಕೊಡಗಿನ ಪ್ರಕೃತಿಯ ಮಧ್ಯೆ ತಮ್ಮ ಸಮ್ಮರ್ ವೆಕೇಶನ್ ಅನ್ನು ಅದ್ಧೂರಿಯಾಗಿ ಎಂಜಾಯ್ ಮಾಡುತ್ತಿದ್ದಾರೆ.




