ದೇಶದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ!
Launch of the country's first private rocket, ‘Vikram-1’!

ಆಂಧ್ರಪ್ರದೇಶ : ದೇಶದ ಮೊದಲ ಖಾಸಗಿ ಅಭಿವೃದ್ಧಿತ ಕಕ್ಷೀಯ ದರ್ಜೆಯ (Orbital-class) ರಾಕೆಟ್ ‘ವಿಕ್ರಮ್-1’ (Vikram-1), ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.
ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್‌ಅಪ್ ‘ಸ್ಕೈರೂಟ್ ಏರೋಸ್ಪೇಸ್’ ಈ ಅತ್ಯಾಧುನಿಕ ರಾಕೆಟ್ ಅನ್ನು ವಿನ್ಯಾಸಗೊಳಿಸಿ, ನಿರ್ಮಿಸಿದೆ.
‘ಮಿಷನ್ ಆಗಮನ್’ ಎಂದು ಹೆಸರಿಸಲಾದ ಈ ಪರೀಕ್ಷಾರ್ಥ ಉಡಾವಣೆಯನ್ನು ಮೊದಲು ಬೆಳಗ್ಗೆ 11:30 ಕ್ಕೆ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ ಎದುರಾದ ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆ ಕೊಂಚ ವಿಳಂಬವಾಯಿತು. ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಮಧ್ಯಾಹ್ನ 12:05 ಕ್ಕೆ ಉಡಾವಣೆ ಮಾಡಲಾಯಿತು.
ಪ್ರಧಾನಿ ನರೇಂದ್ರ ಮೋದಿ ಕೈಬರಹದಲ್ಲಿ ‘ವಂದೇ ಮಾತರಂ’ ಎಂದು ಬರೆದಿರುವ ವಿಶೇಷ ಪೋಸ್ಟ್‌ಕಾರ್ಡ್ ಅನ್ನು ಈ ವಿಕ್ರಮ್-1 ರಾಕೆಟ್ ಬಾಹ್ಯಾಕಾಶಕ್ಕೆ ಕೊಂಡೊಯ್ದಿದೆ. ವಿಕ್ರಮ್-1 ರ ಈ ಚೊಚ್ಚಲ ಕಕ್ಷೀಯ ಉಡಾವಣೆಯ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.




