ರಾಜ್ಯಸಿನಿಮಾಸುದ್ದಿ

ಕನ್ನಡ ಕಿರುತೆರೆಗೆ ನಟಿಗೆ ಗುಪ್ತಾಂಗದ ವಿಡಿಯೋ ಕಳುಹಿಸಿ ಕಿರುಕುಳ; ಆರೋಪಿ ಅರೆಸ್ಟ್​​

ಕನ್ನಡದ ಖ್ಯಾತ ಸೀರಿಯಲ್ ನಟಿಗೆ ಓರ್ವ ವ್ಯಕ್ತಿ ಸೋಷಿಯಲ್​ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಕಳಿಸಿ ಲೈಂಗಿಕ ಕಿರುಕುಳ ನೀಡಲಾಗಿದೆ..

ಕಿರುತೆರೆ ನಟಿಗೆ ಫೇಸ್​​​ಬುಕ್​ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ಕಿರುಕುಳ ನೀಡಲಾಗಿದೆ.. ಆ ವ್ಯಕ್ತಿಯ ಅಕೌಂಟ್​ ಬ್ಲಾಕ್​ ಮಾಡಿದರೂ ಬೇರೆ ಖಾತೆಯಿಂದ ಮೇಸೆಜ್​​​​​ ಮಾಡಲು ಆರಂಭಿಸಿದ್ದಾನೆ. ಆರೋಪಿ ಮೊದಲು ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ನಟಿ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್‌ನಲ್ಲಿ ಮೆಸೇಜ್ ಮಾಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ನಟಿ ಮೆಸೇಜ್ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕಿರುಕುಳ ಹೆಚ್ಚಾಗ್ತಿದ್ದ ಹಿನ್ನೆಲೆ ಆತನ ಅಕೌಂಟ್‌ ಬ್ಲಾಕ್ ಮಾಡಿದ್ದರು . ಆದ್ರೂ ತಾಳ್ಮೆ ಕಳೆದುಕೊಳ್ಳದ ನಟಿ ಇದೇ ನವೆಂಬರ್‌ 1ರಂದು ನಾಗರಭಾವಿಯ ನಂದನ್ ಪ್ಯಾಲೆಸ್ ಬಳಿ ಆರೋಪಿಯನ್ನ ಭೇಟಿ ಮಾಡಿ ಬುದ್ಧಿ ಮಾತು ಹೇಳಿದ್ದರು.

ಈ ರೀತಿ ಮೆಸೇಜ್‌ ಮಾಡಬಾರದು ಅಂತ ಕಿವಿಮಾತು ಹೇಳಿದ್ರು. ಆದ್ರೂ ಬುದ್ಧಿ ಕೇಳದ ಆರೋಪಿ ಮತ್ತೆ ಅಶ್ಲೀಲ ಮೆಸೇಜ್‌ ಮಾಡೋದನ್ನ ಮುಂದುವರಿದ್ದ. ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ನಟಿ ದೂರು ನೀಡಿದ್ದರು. ನಟಿಯ ದೂರಿನ ಆಧಾರದ ಮೇಲೆ ಕೇಸ್‌ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights