Freedom TV

ಸಿಎಂ ಗೃಹ ಕಛೇರಿಯಲ್ಲೂ ನೀರಿನ ಪ್ರಾಬ್ಲಂ: ಟ್ಯಾಂಕರ್ ಮೊರೆ ಹೋದ ಸಿಬ್ಬಂದಿ

ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಬೇಸಿಗೆಗೂ ಮುನ್ನವೇ ನೀರಿನ ಅಭಾವ ಎದುರಾಗಿರೋದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ, ಪರಿಹಾರದ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತ ನೀರಿನ ಸಮಸ್ಯೆ ಕೇವಲ ಬೆಂಗಳೂರಿನ ಸಾಮಾನ್ಯ ಜನರನ್ನ ಮಾತ್ರ ಭಾದಿಸುತ್ತಿಲ್ಲ..ಸ್ವತಃ ಸಿಎಂ ಗೃಹ ಕಚೇರಿ ಕೃಷ್ಣಾಗೂ ತಟ್ಟಿದೆ. ಹೌದು.. ವಿನ್ಸರ್ ಮ್ಯಾನರ್ ಬಳಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಗೃಹ ಕಚೇರಿ ಕೃಷ್ಣಾದಲ್ಲಿ ನೀರಿಲ್ಲದೆ ಟ್ಯಾಂಕರ್ ನಲ್ಲಿ ನೀರು ಹೊಡೆಸುತ್ತಿದ್ದಾರೆ. ಸಿಎಂ ಭೇಟಿಯಾಗೋಕೆ ಜನಸಾಮಾನ್ಯರು ಮತ್ತು ಆಡಳಿತ ವ್ಯವಹಾರಗಳ ವಿಚಾರವಾಗಿ ಅಧಿಕಾರಿಗಳು ಬಂದು ಹೋಗುವ ಗೃಹ ಕಛೇರಿ ಕೃಷ್ಣಾದಲ್ಲೂ ನೀರಿಲ್ಲದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೃಷ್ಣಾದ ಸಿಬ್ಬಂದಿಗಳು ನೀರಿನ ಟ್ಯಾಂಕರ್ ಕರೆಸಿದ್ದ ದೃಶ್ಯ ಕಂಡು ಬಂತು. ಒಟ್ನಲ್ಲಿ ಜನಸಾಮಾನ್ಯರಿಗೆ ತಟ್ಟಿರುವ ನೀರಿನ ಅಭಾವದ ಬಿಸಿ, ಇದೀಗ, ಸರ್ಕಾರಿ ಗೃಹಗಳು, ಕಛೇರಿಗಳನ್ನು ಬಾಧಿಸುತ್ತಿದೆ. ಅವರೇನೋ ಹಣ ಕೊಟ್ಟು ಟ್ಯಾಂಕರ್ ನೀರು ಹೊಡೆಸಿಕೊಳ್ತಾರೆ. ಆದ್ರೆ ಬಡ ಜನಸಾಮಾನ್ಯರು ಏನು ಮಾಡ್ಬೇಕು ಅನ್ನೋ ಪ್ರಶ್ನೆ ಎದುರಾಗಿದೆ

Comments (0)

Your email address will not be published. Required fields are marked *

Back to top button