ಸುದ್ದಿ

ಬಿಬಿಎಂಪಿ ಪಡಸಾಲೆಯಲ್ಲಿ ಅಕ್ರಮ ಖಾತೆ ಹಗರಣ ಸದ್ದು..!

ಬೆಂಗಳೂರು : ಬಿಬಿಎಂಪಿ ಪಡಸಾಲೆಯಲ್ಲಿ ಮತ್ತೊಂದು ಹಗರಣ ಸದ್ದು ಮಾಡಿದೆ. ಕಂದಾಯ ವಿಭಾಗದ ವಿಶೇಷ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಅಕ್ರಮಕ್ಕೆ ಕಡಿವಾಣ ಹಾಕೋ ಪ್ರಯತ್ನ ಮಾಡಿದ ಮೇಲೂ ಮುನಿಷ್ ಮೌದ್ಗಿಲ್ ಅವರನ್ನು ಕಂದಾಯ ವಿಭಾಗದ ಅಧಿಕಾರಿಗಳು ಯಾಮಾರಿಸಿ ರೋದು ಆಶ್ಚರ್ಯದೊಂದಿಗೆ ಆತಂಕ ಮೂಡಿಸಿದೆ. ಬಿ ಖಾತಾಗಳಿಗೆ ಅಕ್ರಮವಾಗಿ ಎ ಖಾತೆಗಳ ಸರ್ಟಿಫಿಕೇಟ್ ಕೊಟ್ಟು ಪ್ರತಿಯೊಬ್ಬರಿಂದಲೂ ಲಕ್ಷಾಂತರ ಪೀಕಿರುವ ಅಕ್ರಮದಿಂದ ಬಿಬಿಎಂಪಿಗೆ ಹತ್ತಾರು ಕೋಟಿ ನಷ್ಟವಾಗಿದೆ. ಅಕ್ರಮ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಬಿಬಿಎಂಪಿ ಪಡಸಾಲೆಯಲ್ಲಿ ಅಕ್ರಮ ಖಾತೆ ಹಗರಣ ಸದ್ದು

ಮುನಿಷ್ ಮೌದ್ಗಿಲ್ ಸಾಹೇಬ್ರು ಪಾಲಿಕೆ ಕಂದಾಯ ವ್ಯವಸ್ಥೆ ಸರಿಪಡಿಸೊಕ್ಕೆ ಏನೆಲ್ಲಾ ಸರ್ಕಸ್ ಮಾಡಿದ್ರೂ ಕೆಲವು ಭ್ರಷ್ಟ ಕಂದಾಯಾಧಿಕಾರಿ ಸಿಬ್ಬಂದಿಯಿಂದ ಎಲ್ಲಾ ಪ್ರಯತ್ನ ವಿಫಲವಾಗ್ತಿವೆ. ಕಂದಾಯ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ಮೂಲಕ ಬೊಕ್ಕಸಕ್ಕೆ ಆದಾಯ ತರೊಕ್ಕೆ ಹತ್ತಾರು ಪ್ರಯತ್ನ ಮಾಡ್ತಿದ್ರೆ, ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪವಿಭಾಗದಲ್ಲಿ ಕಂದಾಯಾಧಿಕಾರಿಗಳು ಅಕ್ರಮ ಖಾತೆ ದಂಧೆಯಲ್ಲಿ ಹತ್ತಾರು ಕೋಟಿ ಲಪಟಾಯಿಸಿ ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ ದ್ದಾರೆ. ಈ ಸಂಬಂಧ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಬಿ ಖಾತೆಗಳಿಗೆ ಎ ಖಾತಾ ಸರ್ಟಿಫಿಕೇಟ್ ನೀಡಿ ಅಧಿಕಾರಿಗಳ ಲೂಟಿ

ಕೆಂಗೇರಿ ಉಪ ವಿಭಾಗದ ಹೆಮ್ಮಿಗೆಪುರ ವಾರ್ಡ್ ನಲ್ಲಿ 2024 ರ ಫೆಬ್ರವರಿ ತಿಂಗಲೊಂದರಲ್ಲೇ 200 ಸ್ವತ್ತು ಗಳಿಗೆ ನಕಲಿ `ಎ’ ಖಾತಾ ಮಾಡಿಕೊಡಲಾಗಿತ್ತು.ಕಂದಾಯಾಧಿಕಾರಿ ಬಸವರಾಜ ಮಾಗಿ, ಸಹಾಯಕ ಕಂದಾಯಾಧಿಕಾರಿ ದೇವರಾಜ್ ಇದರಲ್ಲಿ ನೇರವಾಗಿ ಶಾಮೀಲಾಗಿದ್ರೆ, ಜಂಟಿ ಆಯುಕ್ತ ಅಜಯ್, ಉಪ ಆಯುಕ್ತ ಅಬ್ದುಲ್ ರಬ್ ಅವರು ಯಾವುದೇ ಪರಿಶೀಲನೆ ನಡೆಸದೆ ಫೈಲ್ ಅಪ್ರೂವಲ್ ಮಾಡಿದ್ರು.ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಅದೇ ಕಚೇರಿ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರಿಗೆ ನೀಡಿದ್ದರೆನ್ನುವ ಆರೋಪದ ಮೇಲೆ ಜಂಟಿ ಆಯುಕ್ತ ಅಜಯ್ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿತ್ತು

ಪಾಲಿಕೆ ಬೊಕ್ಕಸಕ್ಕೆ ಹತ್ತಾರು ಕೋಟಿ ನಷ್ಟ-ಲೋಕಾಯುಕ್ತಕ್ಕೆ ದೂರು

ಖಾತಾ ಅಕ್ರಮ ಸಂಬಂಧ ಮಂಜುನಾಥ್ ಬಿಬಿಎಂಪಿ ಮುಖ್ಯಸ್ಥರಿಗೆ ದೂರು ಕೊಟ್ರೂ ಅದರ ಬಗ್ಗೆ ಕ್ರಮ ಕೈಗೊಳ್ಳದೆ ತಮ್ಮ ಅಕ್ರಮ ಮುಚ್ಚಿಕೊಳ್ಳೊಕ್ಕೆ ದೂರುದಾರರ ವಿರುದ್ಧವೇ ಕಂಪ್ಲೆಂಟ್ ಮಾಡಿ ಎಫ್ ಐ ಆರ್ ಹಾಕಿಸಿದ್ದು ಎಷ್ಟು ಸರಿ..? ಖಾತಾ ಅಕ್ರಮದಲ್ಲಿ ಭಾಗಿಯಾದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ರು.

ಇನ್ನು ಈ ಬಗ್ಗೆ ರಿಯಾಕ್ಟ್ ಮಾಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಬಿಬಿಎಂಪಿ ಕಮಿಷನರ್ ಖಾತಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಯಾವುದೇ ಅಧಿಕಾರಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ.ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮವಾಗಲಿದೆ ಎಂದ್ರು.

ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ್ದಾರೆ.ಖಾತಾ ಅಕ್ರಮವನ್ನು ಬಗೆಯುವ ಕೆಲಸ ಸರಿಯಾಗಿ ನಡೆದಲ್ಲಿ ಹಗರಣದಲ್ಲಿ ಭಾಗಿಯಾಗಿರುವ ಮತ್ತಷ್ಟು ಹೆಸರುಗಳು ಬಯಲಿಗೆ ಬರಲಿವೆ.

Comments (0)

Your email address will not be published. Required fields are marked *

Back to top button