ಪ್ರೇಮಲು(Premalu) ಸಿನಿಮಾ ಮೂಲಕ ಮಲಯಾಳಂ ಸಿನಿ ಇಂಡಸ್ಟ್ರಿಯಲ್ಲಿ ಮಮಿತಾ ಬೈಜು(Mamitha Baiju) ಹೆಸರು ಟಾಕ್ ಆಫ್ ದಿ ಟೌನ್ ಆಗಿದೆ. ಈ ಬ್ಯೂಟಿ ಈ ಸಿನಿಮಾಗಿಂತ ಮೊದಲು ಪ್ರಮುಖ ನಿರ್ದೇಶಕರೊಬ್ಬರ ವಣಂಗಾನ್ (Vanangan) ಮೂವಿಯಲ್ಲಿ ನಟಿಸಬೇಕಿತ್ತು.
ಇದರಲ್ಲಿ ಸ್ಟಾರ್ ಹೀರೋ ಸೂರ್ಯ ಜೊತೆಗೂಡಿ ಮಮಿತಾ ಬೈಜು ಆಕ್ಟ್ ಮಾಡಬೇಕಿತ್ತು. ಸಿನಿಮಾಗೆ ಓಕೆ ಹೇಳಿ ಶೂಟಿಂಗ್ ಸೆಟ್ಗೂ ಮಮಿತಾ ಬೈಜು ತೆರಳಿದ್ರು. ಆದರೆ, ಅಲ್ಲಿದ್ದಿದ್ದು ಖ್ಯಾತ ನಿರ್ದೇಶಕ ಬಾಲಾ(Bala).
ಒಂದು ಸೀನ್ನಲ್ಲಿ ಸರಿಯಾಗಿ ನಟಿಸಲಿಲ್ಲ ಎಂಬ ಕಾರಣಕ್ಕೆ ಮಮಿತಾಗೆ ನಿರ್ದೇಶಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ರು.
ಅಷ್ಟೇ ಅಲ್ಲ, ನಾಯಕಿಯನ್ನು ಆ ನಿರ್ದೇಶಕರು ಹೊಡೆದರು ಎಂಬ ಕಾರಣಕ್ಕೆ ಶೂಟಿಂಗ್ ನಿಂತು ಹೋಗಿತ್ತು. ಬಳಿಕ ಆ ಸಿನಿಮಾ ಪ್ರಾಜೆಕ್ಟ್ನಿಂದಲೇ ಈ ಬ್ಯೂಟಿ ಹೊರಬಂದಿದ್ರು..
ನಂತರ ಈ ಸಿನಿಮಾದಿಂದ ನಟ ಸೂರ್ಯ (Suriya) ಕೂಡ ಹಿಂದೆ ಸರಿದರು ಎಂಬುದು ಇಲ್ಲಿ ಗಮನಾರ್ಹ ವಿಚಾರ.