ರಾಜ್ಯಸಿನಿಮಾಸುದ್ದಿ

ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ ; ನಟ ಸಂತೋಷ್ ವಿರುದ್ಧ FIR..!

ಬೆಂಗಳೂರು: ನಟನೊಬ್ಬ ಯುವತಿಗೆ ಸಿನಿಮಾದಲ್ಲಿ ಛಾನ್ಸ್ ಕೊಡಿಸ್ತೀನಿ ಅಂತ ಹೇಳಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಲೂನ್ ಶಾಪ್ ವೊಂದರಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮೋಸ ಹೋಗಿದ್ದು ಇದೀಗ ನ್ಯಾಯಕ್ಕಾಗಿ ಠಾಣೆಗೆ ಅಲೆದಾಡುತ್ತಿದ್ದಾಳೆ. ಕನ್ನಡ ಮತ್ತು ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಸಂತೋಷ್ ಎಂಬಾತನೇ ಯುವತಿಗೆ ವಂಚಿಸಿರುವ ಆರೋಪಿ. ಈತ ನಿನಗೆ ನಾನು ಸಿನಿಮಾದಲ್ಲಿ ಅವಕಾಶ ಕೊಡಿಸ್ತೀನಿ. ನಿನ್ನನ್ನ ಹೀರೋಯಿನ್ ಮಾಡ್ತೀನಿ ಅಂತ ಹೇಳಿ ನಂಬಿಸಿ ಆಕೆಯ ಜೊತೆ ಪ್ರೀತಿಯ ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡು ಕೊನೆಗೆ ಕೈಕೊಟ್ಟಿದ್ದಾನೆ. ಸಂತೋಷ್ ನಿಂದ ತಾನು ಮೋಸ ಹೋಗಿದ್ದೇನೆಂದು ತಿಳಿದ ಯುವತಿ ಕೊನೆಗೆ ಆತನಿಂದ ದೂರ ಕೂಡಾ ಆಗಿದ್ಲಂತೆ. ಆದ್ರೆ ಆರೋಪಿ ಸಂತೋಷ್ ಪದೇ ಪದೇ ಯುವತಿಯ ಮನೆ ಹತ್ರ ಬಂದು ತನ್ನ ಜೊತೆ ಬರುವಂತೆ ಕಿರುಕುಳ ಕೊಡ್ತಿದ್ನಂತೆ. ಬರ್ಲಿಲ್ಲ ಅಂದ್ರೆ ರಸ್ತೆಯಲ್ಲೇ ಹಲ್ಲೆ ಮಾಡ್ತಿದ್ದ ಎಂದು ಯುವತಿ ಅರೋಪಿಸಿದ್ದಾಳೆ.

ಕೊನೆಗೆ ಅರೋಪಿ ಕಿರುಕುಳಕ್ಕೆ ಬೇಸತ್ತು ಯುವತಿ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಠಾಣೆಯ ಎದುರೇ ತನ್ನ ಮೇಲೆ ಸಂತೋಷ್ ಹಲ್ಲೆ ಮಾಡಿದ್ರೂ ಪೊಲೀಸರು ಈ ಬಗ್ಗೆ ಪ್ರಶ್ನಿಸಲಿಲ್ಲ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಕಳೆದ ಆರು ತಿಂಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಯುವತಿ, ಫೆಬ್ರವರಿ 15 ರಂದು ಎರಡನೇ ಬಾರಿಗೆ ಎಫ್ಐಆರ್ ದಾಖಲಿಸಿದ್ದೇನೆ. ಆರು ತಿಂಗಳ ಹಿಂದೆ ಒಂದು ಎಫ್ಐಆರ್ ದಾಖಲಾಗಿತ್ತು ಎಂದು ಹೇಳಿದ್ದು, ತನಗೆ ನ್ಯಾಯ ಬೇಕೆಂದು ಆಗ್ರಹಿಸಿದ್ದಾಳೆ.

Comments (0)

Your email address will not be published. Required fields are marked *

Back to top button