ರಾಜ್ಯ

ಬಸ್ ಟಿಕೆಟ್ ದರ ಏರಿಕೆ – ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ!

Bus fare hike – Revised fares come into effect from midnight tonight!

ಬೆಂಗಳೂರು : ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯ ಬಸ್ ಟಿಕೆಟ್‌ ದರವನ್ನು ಅಧಿಕೃತವಾಗಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಸೇರಿದಂತೆ ನಾಲ್ಕೂ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳವಾಗಲಿದೆ.

ರಾಜ್ಯದಲ್ಲಿ ಡಿಸೇಲ್ ದರ ಹಾಗೂ ಸಿಬ್ಬಂದಿ ವೆಚ್ಚ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಮಾಡಲು ಅವಕಾಶ ನೀಡುವ ನಿಟ್ಟಿನನಲ್ಲಿ ನಾಲ್ಕು ನಿಗಮಗಳಿಗೆ ಸರ್ಕಾರ ಆದೇಶ ಈ ಹಿಂದೆಯೇ ನೀಡಿತ್ತು. ಆದರೆ 10 ವರ್ಷಗಳಲ್ಲಿ ಒಂದೇ ಬಾರಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಆದರೆ ವಿರೋಧ ಪಕ್ಷಗಳು ಈ ಬಗ್ಗೆ ಸುಳ್ಳು ಆರೋಪ ಮಾಡುತ್ತಿವೆ ಎಂದು ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಸ್ಟೇಜ್ ಗೆ ₹6 ರಷ್ಟಿದ್ದ ಟಿಕೆಟ್ ದರವನ್ನು ₹10ಕ್ಕೆ ಏರಿಕೆ ಮಾಡಲಾಗಿದೆ. ಬಿಎಂಟಿಸಿ ಬಸ್‌ ನಲ್ಲಿ ಈ ಹಿಂದೆ ಸ್ಟೇಜ್ ಗೆ 6 ರೂಪಾಯಿ ಇತ್ತು. ಇದೀಗ 10 ರೂಪಾಯಿಗೆ ಏರಿಕೆ ಮಾಡಲಾಗಿದೆ. ವಾಯುವಜ್ರ ಬಸ್‌ ನಲ್ಲಿ ಕೊನೆಯ ಸ್ಟೇಜ್‌ಗೆ ₹90 ರೂಪಾಯಿ ಏರಿಕೆ ಮಾಡಲಾಗಿದೆ. 75 ರೂಪಾಯಿ ಇದ್ದ ದರವನ್ನು ಇದೀಗ 90 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಏರಿಕೆ ಪ್ರಮಾಣ ಹೇಗಿದೆ?

ಸಾಮಾನ್ಯ ಬಸ್‌ಗಳು – ಬೆಂಗಳೂರಿನಿಂದ

  • ನೆಲಮಂಗಲ: ಪ್ರಸ್ತುತ ದರ – ₹35, ಪರಿಸ್ಕೃತ ದರ -₹44
  • ಹೊಸಕೋಟೆ: ಪ್ರಸ್ತುತ ದರ- 35, ಪರಿಸ್ಕೃತ -44
  • ದೊಡ್ಡಬಳ್ಳಾಪುರ: ಪ್ರಸ್ತುತ ದರ- 38, ಪರಿಸ್ಕೃತ ದರ- 47
  • ಆನೇಕಲ್: ಪ್ರಸ್ತುತ ದರ- 38, ಪರಿಸ್ಕೃತ ದರ- 47
  • ಮಾಗಡಿ: ಪ್ರಸ್ತುತ ದರ- 46, ಪರಿಸ್ಕೃತ ದರ -57
  • ಮಾಲೂರು: ಪ್ರಸ್ತುತ ದರ- 46, ಪರಿಸ್ಕೃತ ದರ- 57

ವೇಗದೂತ ಸಾರಿಗೆ – ಬೆಂಗಳೂರಿನಿಂದ

  • ಕೋಲಾರ: ಪ್ರಸ್ತುತ ದರ- ₹81, ಪರಿಸ್ಕೃತ ದರ- ₹100
  • ತುಮಕೂರು: ಪ್ರಸ್ತುತ ದರ- 81, ಪರಿಸ್ಕೃತ -100
  • ಮಂಡ್ಯ: ಪ್ರಸ್ತುತ ದರ- 110, ಪರಿಸ್ಕೃತ -136
  • ಮೈಸೂರು: ಪ್ರಸ್ತುತ ದರ-160, ಪರಿಸ್ಕೃತ -197
  • ಹಾಸನ: ಪ್ರಸ್ತುತ ದರ- 219, ಪರಿಸ್ಕೃತ -270
  • ಚಿಕ್ಕಮಗಳೂರು: ಪ್ರಸ್ತುತ ದರ- 295, ಪರಿಸ್ಕೃತ -363

Comments (0)

Your email address will not be published. Required fields are marked *

Back to top button
Verified by MonsterInsights