ಮನರಂಜನೆ

ತೆಲಂಗಾಣ ವಿಧಾನಸಭೆ ಚುನಾವಣೆ 2023 : ಬರಿಗಾಲಲ್ಲಿ ಬಂದು ವೋಟ್​ ಮಾಡಿದ ಚಿರಂಜೀವಿ

ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಆನೇಕ ಸೆಲೆಬ್ರಿಟಿಗಳು ವೋಟ್​​ ಮಾಡುತ್ತಿದ್ದಾರೆ. ಚಿರಂಜೀವಿ, ರಾಜಮೌಳಿ ಸೇರಿ ಅನೇಕ ಸೆಲೆಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಜೊತೆಗೆ ಸೋಶಿಯಲ್​​ ಮೀಡಿಯಾದಲ್ಲಿ ಫೋಟೋ ಪೋಸ್ಟ್​​ ಮಾಡಿ ಅಭಿಮಾನಿಗಳ ಬಳಿ ಮತದಾನ ಮಾಡುವಂತೆ ಕೋರಿದ್ದಾರೆ. ಮೆಗಾಸ್ಟಾರ್​​ ಜಿರಂಜೀವಿ ಅವರು ಪೋಲಿಂಗ್​​ಬೂತ್​​​ಗೆ ಬರಿಗಾಲಿನಲ್ಲಿ ಸಾಗಿದ್ದಾರೆ. ಈ ವಿಡಿಯೋ ಸಖತ್​​ ವೈರಲ್​ ಆಗಿದ್ದು, ಫ್ಯಾನ್ಸ್​​ ವಲಯದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ.


ಚಿರಂಜೀವಿ ಅವರು ಕಾರಿನಲ್ಲಿ ಮತದಾನದ ಕೇಂದ್ರಕ್ಕೆ ಬಂದರು. ಅವರು ಜೀನ್ಸ್ ಹಾಗೂ ಶರ್ಟ್ ಹಾಕಿ ಬರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಕಪ್ಪು ಪಂಚೆ ಹಾಗೂ ಕಪ್ಪು ಬಣ್ಣದ ಶರ್ಟ್ ಧರಿಸಿದ್ದರು. ಹೆಗಲಿಗೆ ಕಪ್ಪು ಬಣ್ಣದ ಶಾಲು ಹಾಕಿದ್ದರು. ಕಾಲಿಗೆ ಚಪ್ಪಲಿ ಧರಿಸಿರಲಿಲ್ಲ. ಇದಕ್ಕೆ ಕಾರಣವೂ ಇದೆ. ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿದರೆ ಈ ರೀತಿಯ ಬಟ್ಟೆ ಧರಿಸುತ್ತಾರೆ. ಹೀಗಾಗಿ, ಚಿರಂಜೀವಿ ಅವರು ಅಯ್ಯಪ್ಪನಿಗೆ ಮಾಲೆ ಹಾಕಿದ್ದಾರೆ ಎಂದು ಎಲ್ಲರೂ ಊಹಿಸಿದ್ದಾರೆ.

Comments (0)

Your email address will not be published. Required fields are marked *

Back to top button