ಸಿನಿಮಾ

ಅಶ್ಲೀಲ ಕಾಮೆಂಟ್‌ ಪ್ರಕರಣ – ಕೇಸ್ ವಾಪಸ್ ಪಡೆಯಲ್ಲ ಎಂದ ನಟಿ ರಮ್ಯಾ!

Obscene comment case – Actress Ramya says she will not withdraw the case!

ಬೆಂಗಳೂರು : ನಟಿ ರಮ್ಯಾಗೆ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್‌ಗಳನ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬಸ್ಥರು ಕೇಸ್‌ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಇಂತಹ ಕೃತ್ಯಗಳು ಸಮಾಜಕ್ಕೆ ಮತ್ತು ಸೈಬರ್ ಲೋಕಕ್ಕೆ ಒಂದು ಪಾಠವಾಗಬೇಕು ಎಂಬ ಕಾರಣಕ್ಕೆ ರಮ್ಯಾ ಅವರು ಕೇಸ್ ವಾಪಸ್ ಪಡೆಯಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ನಟ ದರ್ಶನ್ ಅಭಿಮಾನಿಗಳು ಎನ್ನಲಾದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾ ಅವರಿಗೆ ನಿಂದನಾತ್ಮಕ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಈ ಕುರಿತು ರಮ್ಯಾ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ಕೋರ್ಟ್‌ಗೆ ಬಂದಾಗ, ಕಾನೂನು ಕ್ರಮ ಎದುರಿಸಲು ಹೆದರಿದ ಆರೋಪಿಗಳು ಕೋರ್ಟ್ ಆವರಣದಲ್ಲೇ ನಟಿ ರಮ್ಯಾ ಅವರ ಕಾಲಿಗೆ ಬಿದ್ದು, ‘ಇದೊಂದು ಬಾರಿ ಕ್ಷಮಿಸಿಬಿಡಿ, ನಮ್ಮಿಂದ ದೊಡ್ಡ ತಪ್ಪಾಗಿದೆ’ ಎಂದು ಬೇಡಿಕೊಂಡಿದ್ದಾರೆ. ಕೇವಲ ಆರೋಪಿಗಳಷ್ಟೇ ಅಲ್ಲದೆ, ಅವರ ಕುಟುಂಬದ ಸದಸ್ಯರು ಸಹ ರಮ್ಯಾ ಅವರ ಬಳಿ ಬಂದು ಕೈಮುಗಿದು ಕ್ಷಮೆ ಯಾಚಿಸಿದ್ದಾರೆ.

ಆರೋಪಿಗಳ ಕ್ಷಮೆಯಾಚನೆಗೆ ಮಣಿಯದ ನಟಿ ರಮ್ಯಾ, ಪ್ರಕರಣವನ್ನು ವಾಪಸ್ ಪಡೆಯಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಮೊಬೈಲ್ ಇದೆ, ಇಂಟರ್ನೆಟ್ ಇದೆ ಎಂದಮಾತ್ರಕ್ಕೆ ಹೇಗೆ ಬೇಕಾದರೂ ಕಾಮೆಂಟ್ ಮಾಡಬಹುದಾ? ಯಾರೋ ಒಬ್ಬ ಹೆಣ್ಣುಮಕ್ಕಳ ಮೇಲೆ ಈ ರೀತಿ ಅಸಹ್ಯವಾಗಿ ವರ್ತಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಇದು ಮುಂದಿನ ದಿನಗಳಲ್ಲಿ ಇಂತಹವರಿಗೆ ಒಂದು ಪಾಠವಾಗಬೇಕು. ಹಾಗಾಗಿ ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button