ಜಿಲ್ಲೆ

ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವ್‌ಗೆ ಆಹ್ವಾನ!

Actor Prabhu Deva invited to inaugurate Yuva Dasara!

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಾಂಸ್ಕೃತಿಕ ವೈಭವದ ಪ್ರಮುಖ ಆಕರ್ಷಣೆಯಾದ ‘ಯುವದಸರಾ’ ಕಾರ್ಯಕ್ರಮವನ್ನು ಉದ್ಘಾಟಿಸಲು ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.

ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ತೆರಳಿದ ಯುವದಸರಾ ಉಪಸಮಿತಿಯ ಪ್ರಮುಖರು, ಪ್ರಭುದೇವ್ ಅವರನ್ನು ಭೇಟಿಯಾಗಿ ಮೈಸೂರು ದಸರಾದ ಯುವದಸರಾ ಉದ್ಘಾಟನೆಗೆ ಆಗಮಿಸುವಂತೆ ಕೋರಿ ಆಹ್ವಾನ ಪತ್ರಿಕೆ ನೀಡಿದರು. ಈ ಆಹ್ವಾನವನ್ನು ಪ್ರಭುದೇವ್ ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಯುವದಸರಾ ಸಮಿತಿಯ ನಿಯೋಗದಿಂದ ಆಹ್ವಾನ ಯುವದಸರಾ ಕಾರ್ಯಾಧ್ಯಕ್ಷರಾದ ಸೋಮಶೇಖರ್, ಅರುಣ್ ಹಾಗೂ ಸತ್ಯಮೂರ್ತಿ ನೇತೃತ್ವದ ಅಧಿಕೃತ ನಿಯೋಗವು ಚೆನ್ನೈಗೆ ತೆರಳಿ ಪ್ರಭುದೇವ್ ಅವರನ್ನು ಭೇಟಿಯಾಯಿತು. ‘ಭಾರತದ ಮೈಕೆಲ್ ಜಾಕ್ಸನ್’ ಎಂದೇ ಖ್ಯಾತಿ ಪಡೆದಿರುವ ಪ್ರಭುದೇವ್ ಅವರಿಂದ ಯುವದಸರಾಗೆ ಚಾಲನೆ ಸಿಗುತ್ತಿರುವುದು ರಾಜ್ಯದ ಯುವಜನರಲ್ಲಿ ಮತ್ತು ಕಲಾಪ್ರೇಮಿಗಳಲ್ಲಿ ಭಾರೀ ಕುತೂಹಲ ಹಾಗೂ ನಿರೀಕ್ಷೆಯನ್ನು ಮೂಡಿಸಿದೆ.

Comments (0)

Your email address will not be published. Required fields are marked *

Back to top button