ರಾಜಕೀಯ
ಡ್ಯಾಂ ತುಂಬುವ ಹಂತದಲ್ಲಿದೆ.. ಡ್ಯಾಂ ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋಕೆ ಆಗಲ್ಲ – ಸಿಎಂ ಡಿಕೆಶಿ!
If the dam is full, water cannot be retained – CM DKSH!

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಂಜೆಯೊಳಗೆ ಒಂದು ಡ್ಯಾಂ ತುಂಬುವ ಸ್ಥಿತಿಯಲ್ಲಿದೆ. ಡ್ಯಾಂ ತುಂಬಿದ್ರೆ ನೀರು ಹಿಡಿದಿಟ್ಟುಕೊಳ್ಳೋಕೆ ಆಗಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡೋದಾಗಿ ಹೇಳಿದ್ದಾರೆ.
ಈ ಬಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಡ್ಯಾಂ ಭರ್ತಿಯಾದರೆ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹರಿಬಿಡುವುದು ಅನಿವಾರ್ಯವಾಗುತ್ತದೆ. ನೀರು ಜಲಾಶಯದ ಸಾಮರ್ಥ್ಯ ಮೀರಿ ಹರಿಯುವಾಗ ಅದನ್ನು ತಡೆದು ಹಿಡಿದಿಟ್ಟುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಸರ್ವಪಕ್ಷ ಸಭೆಗೆ ಬಿಜೆಪಿ ಟೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸರ್ವಪಕ್ಷ ಸಭೆಗೆ ಸಲಹೆ ಕೊಟ್ಟಿದ್ದೇ ಬಿಜೆಪಿಯವರು. ಈಗ ಅವ್ರೇ ಆರೋಪ ಮಾಡ್ತಾರೆ ಮಾಡಲಿ, ನಾಳೆ ಸರ್ವಪಕ್ಷ ಸಭೆ ಕರೆದಿದ್ದೇನೆ, ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.




