bengaluru

ಲಂಚಕ್ಕೆ ಬೇಡಿಕೆ – ಹೆಡ್​ ಕಾನ್ಸ್​​​ಟೇಬಲ್ ಸಸ್ಪೆಂಡ್‌!

Demand for bribe - Head Constable suspended!

ಬೆಂಗಳೂರು : ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಟೇಬಲ್ ಒಬ್ಬರನ್ನ ಅಮಾನತು ಮಾಡಲಾಗಿದೆ.

ಪುಲಕೇಶಿನಗರ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್‌ಟೇಬಲ್ ಸೋಮಶೇಖರ್ ವಿರುದ್ಧ ಕೋರ್ಟ್‌ನಲ್ಲಿ ಫೈನ್ ಕಟ್ಟಬೇಕಿದ್ದ ಪ್ರಕರಣವೊಂದರಲ್ಲಿ ಲಂಚ ಪಡೆದ ಆರೋಪವಿದೆ. ಹೆಡ್ ಕಾನ್ಸ್​ಟೇಬಲ್ ಸೋಮಶೇಖರ್ ಅನ್ನು ಸಸ್ಪೆಂಡ್‌ ಮಾಡಿ ಪೂರ್ವ ವಿಭಾಗ ಸಂಚಾರಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.

ಕಳೆದ ಜುಲೈ 18ರಂದು ಕಬ್ಬಿಣದ ಲೋಡ್ ತುಂಬಿಕೊಂಡು ಬಂದಿದ್ದ ಲಾರಿಯೊಂದನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ, ಸಂಚಾರಕ್ಕೆ ಅಡ್ಡಿಯಾಗಿದೆ ಎಂಬ ಆರೋಪದಡಿ ಲಾರಿ ಡ್ರೈವರ್ ವಿರುದ್ಧ BNS ಸೆಕ್ಷನ್ 285 ರಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಫೈನ್ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದ ಹೆಡ್ ಕಾನ್ಸ್​ಟೇಬಲ್ ಸೋಮಶೇಖರ್, ವಶಪಡಿಸಿಕೊಂಡಿದ್ದ ವಾಹನವನ್ನು ಬಿಡುಗಡೆ ಮಾಡುವುದಾಗಿ ನಂಬಿಸಿ ಚಾಲಕನ ಬಳಿ 5,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ಹಣ ನೀಡೋ ವೇಳೆ ಲಾರಿ ಚಾಲಕ ಪೋನ್​​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಸಾಕ್ಷ್ಯಸಮೇತ ಈ ಕುರಿತು ಲಾರಿ ಚಾಲಕ ನೇರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಕರ್ತವ್ಯಲೋಪದಡಿ ಹೆಡ್ ಕಾನ್ಸ್​ಟೇಬಲ್​​ ಸೋಮಶೇಖರ್​ ಅನ್ನು ಅಮಾನತು ಮಾಡಲಾಗಿದೆ.

Comments (0)

Your email address will not be published. Required fields are marked *

Back to top button