ದೇಶ/ವಿದೇಶ
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ದೋಣಿ ಮುಳುಗಡೆ – 15 ಭಾರತೀಯರು ಸಾವು!
Boat sinks in Vietnam's Ha Long Bay – 15 Indians dead!

ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ 32 ಮಂದಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿರುವ ಘಟನೆ ನಡೆದಿದೆ. ಈ ಭೀಕರ ದೋಣಿ ದುರಂತದಲ್ಲಿ 8 ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ.
ಹಠಾತ್ ಬಿರುಗಾಳಿ, ಮಳೆಗೆ ದೋಣಿ ನಿಯಂತ್ರಣ ತಪ್ಪಿ ಮುಳುಗಡೆಯಾಗಿದ್ದು, ಘಟನೆ ಬಳಿಕ ಸ್ಥಳೀಯ ಅಧಿಕಾರಿಗಳು ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಕ್ಷಣಾ ತಂಡಗಳಿಂದ 11 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನು ನಾಪತ್ತೆಯಾದ 8 ಜನರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಸಾವನ್ನಪ್ಪಿದವರ ಪೈಕಿ 15 ಮಂದಿ ಭಾರತೀಯರಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಭಾರತೀಯರಿದ್ದ ಬೋಟ್ ಮುಳುಗಡೆಯಾಗಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.




