bengaluruರಾಜಕೀಯ

ವಾಹನ ಸವಾರರೇ ಎಚ್ಚರ! ನಾಳೆ ಬೆಂಗಳೂರಿನ ಪ್ರಮುಖ ರಸ್ತೆಗಳು ಬಂದ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಳೆ (ಜೂನ್ 3) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆಯಲಿರುವ ಈ ಅದ್ಧೂರಿ ಸಮಾರಂಭಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರಮುಖ ರಾಜಕೀಯ ಗಣ್ಯರು ಹಾಗೂ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರಿ ಪೊಲೀಸ್ ಇಲಾಖೆಯು ನಗರದ ಕೇಂದ್ರ ಭಾಗದಲ್ಲಿ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ.

ನಾಳೆ ಮಧ್ಯಾಹ್ನ 12:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ.

ಯಾವೆಲ್ಲಾ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ನಿಷೇಧ?
ಕಬ್ಬನ್ ರಸ್ತೆ: ಬಿಆರ್‌ವಿ (BRV) ಜಂಕ್ಷನ್‌ನಿಂದ ಸಿಟಿಒ (CTO) ಜಂಕ್ಷನ್‌ವರೆಗೆ ಹಾಗೂ ಸಿಟಿಒ ವೃತ್ತದಿಂದ ಲೋಕಭವನದವರೆಗೆ

ಬಾಳೇಕುಂದ್ರಿ ಜಂಕ್ಷನ್: ಇಲ್ಲಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಕಡೆಗೆ ಹೋಗುವ ಮಾರ್ಗ

ಕೆ.ಆರ್. ವೃತ್ತ: ಇಲ್ಲಿಂದ ಕಾಫಿ ಬೋರ್ಡ್ ಜಂಕ್ಷನ್ ಕಡೆಗೆ ಹೋಗುವ ರಸ್ತೆ

ರೇಸ್ ಕೋರ್ಸ್ ರಸ್ತೆ: ಟ್ರೈಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್‌ವರೆಗೆ

ಕ್ವೀನ್ಸ್ ಜಂಕ್ಷನ್: ಇಲ್ಲಿಂದ ಸಿಟಿಒ/ಲೋಕಭವನ ಕಡೆಗೆ ಹೋಗುವ ಮಾರ್ಗ ಬಂದ್

ಸೇಂಟ್ ಮಾರ್ಕ್ಸ್ ರಸ್ತೆ: ಇಲ್ಲಿಂದ ಕ್ವೀನ್ಸ್ ಜಂಕ್ಷನ್ ಮೂಲಕ ಸಿಟಿಒ ಕಡೆಗೆ ಹೋಗುವ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಪರ್ಯಾಯ ಮಾರ್ಗಗಳು!
ನಗರದ ಮಧ್ಯಭಾಗದಲ್ಲಿ ಉಂಟಾಗುವ ಭಾರಿ ಟ್ರಾಫಿಕ್ ಜಾಮ್ ತಪ್ಪಿಸಲು ಸಾರ್ವಜನಿಕರು ಶಿವಾಜಿನಗರ, ಕನ್ನಿಂಗ್‌ ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ವೃತ್ತ, ಹೊರ ವರ್ತುಲ ರಸ್ತೆ (Outer Ring Road) ಹಾಗೂ ಹೆಬ್ಬಾಳ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ

ನೋ ಪಾರ್ಕಿಂಗ್ ವಲಯಗಳು
ನಾಳೆ ಲೋಕಭವನದ ಸುತ್ತಮುತ್ತಲಿನ ಯಾವುದೇ ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಕ್ವೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ನಾಳೆ ಮಧ್ಯಾಹ್ನ 12:00 ರಿಂದ ರಾತ್ರಿ 10:00 ರವರೆಗೆ ಬೆಂಗಳೂರು ನಗರ ವ್ಯಾಪ್ತಿಯೊಳಗೆ ಲಾರಿ, ಟ್ರಕ್ ಸೇರಿದಂತೆ ಎಲ್ಲಾ ರೀತಿಯ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಾಳೆ ಮಧ್ಯಾಹ್ನದ ನಂತರ ಸಿಟಿ ರೌಂಡ್ಸ್ ಹಾಕುವ ಮುನ್ನ ಸವಾರರು ಈ ಟ್ರಾಫಿಕ್ ಗೈಡ್‌ಲೈನ್ಸ್ ಗಮನದಲ್ಲಿಟ್ಟುಕೊಂಡು, ಪರ್ಯಾಯ ರಸ್ತೆಗಳನ್ನು ಆಯ್ದುಕೊಳ್ಳುವ ಮೂಲಕ ಸಂಚಾರಿ ಪೊಲೀಸರೊಂದಿಗೆ ಸಹಕರಿಸಬೇಕಾಗಿ ಫ್ರೀಡಂ ಟಿವಿ ವಿನಂತಿಸುತ್ತದೆ.

#BengaluruTraffic #TrafficAlert #DKShivakumar #SwearingInCeremony #NammaBengaluru #TrafficDiversion #BengaluruPolice #LokAbhavan #KarnatakaPolitics #BreakingNews #FreedomTVKannada #TrafficAdvisory

Comments (0)

Your email address will not be published. Required fields are marked *

Back to top button