
ತಿರುವನಂತಪುರಂ: ದೇವರ ನಾಡಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೇರಿ ತಿಂಗಳೂ ಆಗಿಲ್ಲ.ಕೂಡಲೆ ಕೇರಳದ ಜನತೆಗೆ ತೀವ್ರ ಶಾಕ್ ನೀಡಿದೆ. ಕೇರಳ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ(ಮಿಲ್ಮಾ) ಜೂನ್ 1 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿನ ದರ 4 ರೂ. ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

ಲೀಟರ್ ಹಾಲಿಗೆ 4 ರೂಪಾಯಿ ಹೆಚ್ಚಿಸಿದ ವಿ.ಡಿ. ಸತೀಶನ್ ಸರ್ಕಾರ
ನೆನ್ನೆ ಮಿಲ್ಮಾ ಆಡಳಿತ ಮಂಡಳಿಯ ಸಭೆಯನ್ನು ಆಯೋಜಿಸಲಾಗಿತ್ತು.ಈ ಸಭೆಯಲ್ಲಿ ಹಾಲಿನ ದರವನ್ನು ಏರಿಸುವ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪರಿಷ್ಕೃತ ದರಗಳು ಜೂನ್ 1 ರಿಂದ ಜಾರಿಗೆ ಬರಲಿವೆ.ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಲಾಗುತ್ತಿದ್ದು,ಇದರ ಬಹುಪಾಲು ಅಂದರೆ 3.75 ರೂ. ನೇರವಾಗಿ ಡೈರಿ ರೈತರಿಗೆ ಹೋಗಲಿದೆ ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಅವರು ಹೇಳಿದ್ದಾರೆ.ಇತ್ತೀಚಿನ ವಿಧಾನಸಭಾ ಚುನಾವಣೆಗಳಿಂದಾಗಿ ಮಂಡಳಿಯು ಹಾಲಿನ ದರ ಪರಿಷ್ಕರಣೆಯನ್ನು ಮುಂದೂಡಿತ್ತು ಮತ್ತು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಕಾಯುತ್ತಿತ್ತು.ಬೇಸಿಗೆಯಲ್ಲಿ ಹಾಲು ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿರುವುದು ಜೊತೆಗೆ ಹೈನುಗಾರಿಕೆ ರೈತರು ಜಾನುವಾರು ಮೇವು ತುಟ್ಟಿಯಾಗಿರುವುದರಿಂದ ಹಾಗೂ ಕಾರ್ಮಿಕ ವೆಚ್ಚಗಳಿಂದ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಹಾಲು ಒಕ್ಕೂಟಗಳು ಹೇಳಿವೆ.
ಇದು ಕೇರಳ ಜನರ ನಿದ್ದೆ ಕೆಡಿಸಿದ್ದು ಎಲ್ಲರೂ ಕೆಂಡಾಮಂಡಲರಾಗಿದ್ದು ಹಳೇ ಸರ್ಕಾರವೇ ಪರವಾಗಿತ್ತು ಎಂದು ಮಾತನಾಡುತ್ತಿದ್ದಾರೆ. ಈ ಬೆಲೆ ಏರಿಕೆ ವಿಚಾರವು ವಿರೋಧ ಪಕ್ಷಗಳಿಗೆ ಆಹಾರವಾಗಿದ್ದು ಕೂಡಲೆ ಪ್ರತಿಭಟನೆಗಳು ನಡೆಯಲಿದ್ದು ರಾಜಕೀಯ ಬೇಳೆ ಬೇಯಲಿದೆ. ಏನೇ ಆಗಲಿ ಜನಸಾಮಾನ್ಯರ ದಿನಬಳಕೆಯ ವಸ್ತು ಹಾಲಿನ ಬೆಲೆ ಏರಿಕೆ ಮಾಡಿರುವುದು ಘೋರ ಅನ್ಯಾಯವೇ ಸರಿ.
FreedomTV #KeralaNews #MilkPriceHike #MilmaMilk #UDFGovernment #KeralaPolitics #Thiruvananthapuram #CommonManBurden #PriceHikeShock #DairyFarmers #CongressInKerala #KannadaNews #NationalUpdates


