ಚಿನ್ನ ಖರೀದಿ ಬೇಡವೆಂದ ಮೋದಿ – ಸಂತೋಷ್ ಲಾಡ್ ಕಿಡಿ!
Santhosh lad agianst Modi statement regarding Gold

ಬೆಂಗಳೂರು: ದೇಶದಲ್ಲಿ ಇತ್ತೀಚೆಗೆ ಸೃಷ್ಟಿಯಾಗಿರುವ ಆರ್ಥಿಕ ಅನಿಶ್ಚಿತತೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ‘ಮಿತವ್ಯಯ’ ಮಂತ್ರದ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಒಂದೆಡೆ ಜನರಿಗೆ ಚಿನ್ನದ ಬಾಂಡ್ ಕೊಳ್ಳಿ ಎಂದು ಉತ್ತೇಜಿಸಿ, ಈಗ ಚಿನ್ನ ಖರೀದಿ ಮಾಡಬೇಡಿ ಎನ್ನುತ್ತಿರುವುದು ವಿಶ್ವಗುರುವಿನ ದ್ವಂದ್ವ ನೀತಿ” ಹೀಗೆ ಹೇಳಲು ಮೋದಿಗೆ ಯಾರು ಎಂದು ಅವರು ಕೆಂಡಕಾರಿದ್ದಾರೆ.

SGB ಬಾಂಡ್ ಹಗರಣದ ಆರೋಪ
ಸಾವರಿನ್ ಗೋಲ್ಡ್ ಬಾಂಡ್ (SGB) ಯೋಜನೆಯನ್ನು ಉಲ್ಲೇಖಿಸಿ ಮಾತನಾಡಿದ ಸಂತೋಷ್ ಲಾಡ್, ಕೇಂದ್ರ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದಾರೆ
“2015 ರಿಂದ 2025ರವರೆಗೆ ಚಿನ್ನದ ಬಾಂಡ್ ಖರೀದಿಸಿ ಎಂದು ಖುದ್ದಾಗಿ ಪ್ರಧಾನಿಯೇ ಹೇಳಿದ್ದರು. ಈಗ ಏಕಾಏಕಿ ಬಂಗಾರ ಖರೀದಿ ಮಾಡಬೇಡಿ ಎನ್ನುತ್ತಿರುವುದು ಯಾಕೆ?”
ಹಣ ಮರುಪಾವತಿ ಎಲ್ಲಿ?
“SGB ಬಾಂಡ್ನಲ್ಲಿ ಹೂಡಿಕೆ ಮಾಡಿದ ಜನರಿಗೆ ಹಣ ವಾಪಸ್ ಸಿಗುತ್ತಿಲ್ಲ. 1 ಲಕ್ಷ ಹೂಡಿಕೆ ಮಾಡಿದವರಿಗೆ ಇಂದು 4 ಲಕ್ಷ ನೀಡಬೇಕಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೇಶದ ಜನರಿಗೆ ಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.ಈ ಯೋಜನೆಯಲ್ಲಿ ಯಾರು ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬ ವಿವರಗಳನ್ನು ಸರ್ಕಾರ ನೀಡುತ್ತಿಲ್ಲ ಎಂದು ಲಾಡ್ ಆರೋಪಿಸಿದ್ದಾರೆ.
ರೂಪಾಯಿ ಮೌಲ್ಯ ಕುಸಿತ – ದೇಶಕ್ಕೆ ಗಂಡಾಂತರ!
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು,ರೂಪಾಯಿ ಮೌಲ್ಯ ಏಷ್ಯಾ ಖಂಡದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಕಿಡಿಕಾರಿದರು.”ಡಾಲರ್ ವಿರುದ್ಧ ರೂಪಾಯಿ ಸಂಪೂರ್ಣ ವೀಕ್ ಆಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ರೂಪಾಯಿ ಬಿದ್ದಾಗ ಮಾತನಾಡುತ್ತಿದ್ದವರು,ಈಗ ದೇಶಕ್ಕೆ ಆಗುತ್ತಿರುವ ಭಾರಿ ನಷ್ಟದ ಬಗ್ಗೆ ಮೌನವಾಗಿದ್ದಾರೆ. ಕಳೆದ 14 ವರ್ಷಗಳಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಆಡಳಿತಾತ್ಮಕವಾಗಿ ಬಹಳ ಹಿಂದೆ ಹೋಗಿದೆ” ಎಂದು ಅವರು ದೂರಿದರು.
ಅಮೆರಿಕಾ ತಾಳಕ್ಕೆ ಮೋದಿ ಕುಣಿತ
ವಿದೇಶಾಂಗ ನೀತಿಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ ಅವರು, “2019ರವರೆಗೆ ಇರಾನ್ನಿಂದ ಕಡಿಮೆ ದರಕ್ಕೆ ತೈಲ ಖರೀದಿ ಮಾಡುತ್ತಿದ್ದೆವು. ಈಗ ರಷ್ಯಾ ಮತ್ತು ಇರಾನ್ ಬಿಟ್ಟು ಕೇವಲ ಅಮೆರಿಕಾ ಹೇಳಿದಂತೆ ಕೇಳುವ ಸ್ಥಿತಿ ಎದುರಾಗಿದೆ. ಅಮೆರಿಕಾ ಹೇಳಿದಂತೆ ಕೇಳುತ್ತಿರುವುದರಿಂದಲೇ ಇಂಧನ ಅಭಾವದ ಭೀತಿ ಎದುರಾಗಿದೆ” ಎಂದು ವಿಶ್ಲೇಷಿಸಿದರು.
ಸಾರ್ವಜನಿಕ ಚರ್ಚೆಗೆ ಕರೆ
ಪ್ರಧಾನಿ ಮೋದಿ ಕೇವಲ ಚುನಾವಣೆ ಗೆಲ್ಲಲು ಮಾತ್ರ ಸೀಮಿತವಾಗಿದ್ದಾರೆ ಹೊರತು, ದೇಶ ಆಳಲು ಅಶಕ್ತರಾಗಿದ್ದಾರೆ.. ಕೇಂದ್ರ ಸರ್ಕಾರದ ಲೋಪಗಳ ಬಗ್ಗೆ ಬಿಜೆಪಿ ನಾಯಕರನ್ನು ಕೇಳಿದರೆ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಬಯ್ಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಈ ಆಡಳಿತದ ವೈಫಲ್ಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಕರು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು.
#SanthoshLad #PMModi #GoldBondScam #SGB #PralhadJoshi #IndianEconomy #RupeeValue #FreedomNews #KarnatakaPolitics #AusterityMeasures #FuelCrisis




