Mantralaya

ಮಂತ್ರಾಲಯದಲ್ಲಿ ಸಿಲಿಂಡರ್ ಸ್ಫೋಟ-ತಪ್ಪಿದ ಭಾರಿ ಅನಾಹುತ!

Cylinder blast in Mantralaya swamiji visit

ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿರುವ ಕಾರ್ಮಿಕರ ಶೆಡ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ. ಭಕ್ತರ ವಸತಿ ಗೃಹಗಳ ಸಮೀಪವೇ ಈ ಅವಘಡ ಸಂಭವಿಸಿದ್ದರಿಂದ ಕ್ಷಣಕಾಲ ಭಕ್ತಾದಿಗಳು ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು.

ಮಠದ ಆವರಣದಲ್ಲಿರುವ ಶ್ರೀ ಸುಯತೀಂದ್ರ ತೀರ್ಥ ಕಾಲೋನಿಯಲ್ಲಿ ಈ ಅವಘಡ ಸಂಭವಿಸಿದೆ. ಮಠದಲ್ಲಿ ಕಟ್ಟಡ ನಿರ್ಮಾಣ ಹಾಗೂ ಟೈಲ್ಸ್ ಕೆಲಸ ಮಾಡುತ್ತಿರುವ ಕಾರ್ಮಿಕರು ವಾಸವಿದ್ದ ಶೆಡ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಿಸಿಲಿನ ತಾಪ ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಶೆಡ್‌ಗೆ ವ್ಯಾಪಿಸುತ್ತಿದ್ದಂತೆ ಅಲ್ಲಿದ್ದ ಗ್ಯಾಸ್ ಸಿಲಿಂಡರ್ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ.

ತಪ್ಪಿದ ಭಾರಿ ಪ್ರಾಣಾಪಾಯ
ಸಿಲಿಂಡರ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದರು.ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಬೆಂಕಿ ಹೊತ್ತಿಕೊಂಡಿದ್ದ ಶೆಡ್‌ನಲ್ಲಿದ್ದ ಇನ್ನುಳಿದ ಎರಡು ಸಿಲಿಂಡರ್‌ಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಹೊರತೆಗೆದಿದ್ದಾರೆ.ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಸ್ಫೋಟ ಹಾಗೂ ಪ್ರಾಣಾಪಾಯ ತಪ್ಪಿದಂತಾಗಿದೆ.

ಸ್ವಾಮೀಜಿ ಭೇಟಿ – ಕಾರ್ಮಿಕರಿಗೆ ನೆರವು
ಘಟನಾ ಸ್ಥಳಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಂಕಿಯಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡ ಕಾರ್ಮಿಕರಿಗೆ ಸ್ವಾಮೀಜಿ ಸಾಂತ್ವನ ಹೇಳಿದರು.”ಬೆಂಕಿ ಅವಘಡದಿಂದ ಐದು ಶೆಡ್‌ಗಳಲ್ಲಿದ್ದ 20 ಜನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಮಠದ ವತಿಯಿಂದ ಅವರಿಗೆ ಅಗತ್ಯವಿರುವ ಪಡಿತರ (ರೇಷನ್), ಬಟ್ಟೆ ಹಾಗೂ ದಿನಬಳಕೆಯ ವಸ್ತುಗಳನ್ನು ತಕ್ಷಣವೇ ಒದಗಿಸಲಾಗುವುದು,” ಎಂದು ಸ್ವಾಮೀಜಿ ಭರವಸೆ ನೀಡಿದ್ದಾರೆ.ಈ ರಿತು ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು,ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

#Mantralayam #RaghavendraSwamyMatha #CylinderBlast #FireAccident #SriSubudhendraTeertha #SafetyFirst #BreakingNews #KarnatakaNews #FreedomTV #MantralayaNews

Comments (0)

Your email address will not be published. Required fields are marked *

Back to top button