bengaluruFreedom TV

ಇದೇ ಜೂನ್ ತಿಂಗಳಲ್ಲಿ GBA ಚುನಾವಣೆ

ಜೂನ್ 20-24ರೊಳಗೆ GBA ಎಲೆಕ್ಷನ್ ಫಿಕ್ಸ್!

ಬೆಂಗಳೂರು: ಸುಪ್ರೀಂಕೋರ್ಟ್‌ ಸೂಚನೆಯಂತೆ ಜೂ. 20 ರಿಂದ 24ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಕಾನೂನಿನನ್ವಯ ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಬಹು ಹಿಂದೆಯೇ ಸಮಾಲೋಚನೆ ನಡೆಸಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಬೇಕಿತ್ತು.ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಎಚ್ಚೆತ್ತ ರಾಜ್ಯ ಸರ್ಕಾರ ಚುನಾವಣೆ ಕುರಿತಾದ ಸಭೆಯನ್ನು ನಡೆಸಿದೆ. ಈ ನಿರ್ಧಾರ ಬೆಂಗಳೂರಿನ ನಿವಾಸಿಗಳಿಗೆ ಸಂತೋಷ ಉಂಟುಮಾಡಿದೆ. ಚುನಾವಣಾ ಪ್ರಕ್ರಿಯೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ದಿನಾಂಕ ಘೋಷಣೆ ಮಾತ್ರ ಬಾಕಿಯಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಐದು ಪಾಲಿಕೆಗಳ ಚುನಾವಣೆ ಕುರಿತು ಕರೆದಿದ್ದ ಸಭೆಯ ಮುಕ್ತಾಯದ ನಂತರ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಈ ಮಾಹಿತಿ ನೀಡಿದರು. ಜೂನ್ 14 ರಿಂದ 24 ರ ಒಳಗೆ ಚುನಾವಣೆ ದಿನಾಂಕ ಘೋಷಿಸಲು ತಿಳಿಸಿರುವುದಾಗಿ ಹೇಳಿದರು.

ಜಿಬಿಎ ಚುನಾವಣೆ ಮುಂದೂಡಲು ಮನವಿ ಮಾಡಲಾಗಿದ್ದರೂ, ಸುಪ್ರೀಂಕೋರ್ಟ್‌ ಜೂನ್ 30ರೊಳಗೆ ಚುನಾವಣೆ ನಡೆಸಬೇಕೆಂಬ ಸ್ಪಷ್ಟ ಆದೇಶ ಇರುವುದರಿಂದ ಮುಂದೂಡುವ ಅಧಿಕಾರ ತಮಗಿಲ್ಲ ಎಂದು ಚುನಾವಣಾ ಆಯುಕ್ತರು ಹೇಳಿದರು. ಜೂ.24 ರೊಳಗೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಸೂಚಿಸಿರುವುದಾಗಿ ಹೇಳಿದರು. ಚುನಾವಣೆ ದಿನಾಂಕ ಬೇಗನೆ ಜಾರಿ ಆಗುವ ಬಗ್ಗೆ ಜಿಬಿಎ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

#GBAElection #GreaterBengaluruAuthority #BBMP #BengaluruElections2026 #LocalBodyPolls #KarnatakaPolitics

Comments (0)

Your email address will not be published. Required fields are marked *

Back to top button