Freedom TVರಾಜಕೀಯ

ಕರ್ನಾಟಕದಲ್ಲಿ ಮಹಿಳಾಮಣಿಗಳಿಗಿಲ್ಲ ಭದ್ರತೆ!

ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಲೈಂಗಿಕ ಕಾಮಪುರಾಣ ಕೇಸಿನಲ್ಲಿ ಆರೋಪ ಎದುರಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗೆ ರಾಜ್ಯ ಸರ್ಕಾರ ಅಮಾನತು ಆದೇಶ ರದ್ದುಪಡಿಸಿ ಮರಳಿ ಸೇವೆಗೆ ಹಾಜರಾಗುವಂತೆ ಆದೇಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ಇದೇನಾ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ತೋರುವ ಗೌರವ. ಭ್ರಷ್ಟ ಅಧಿಕಾರಿಗಳನ್ನು ಸದಾ ರಕ್ಷಿಸುವುದೇ ಕಾಂಗ್ರೆಸ್ ನ ವೇದಮಂತ್ರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಆರ್. ಅಶೋಕ್ ಲೈಂಗಿಕ ಹಗರಣದ ವಿಡಿಯೋ ಅಸಲಿಯಾಗಿದ್ದರೂ ಕಾಮುಕ ಅಧಿಕಾರಿ ರಾಮಚಂದ್ರರಾವ್ ನನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರ ಅಸಲಿ ಮುಖವಾಡ ಬಯಲಿಗೆ ಬಂದಿದೆ.
ಪೊಲೀಸ್ ಮಹಾನಿರ್ದೇಶಕ (DGP) ಶ್ರೇಣಿಯ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ಹೊಣೆ ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ಇಂದು ಅವರ ಅಮಾನತು ಆದೇಶವನ್ನೇ ಹಿಂಪಡೆದು ರೆಡ್ ಕಾರ್ಪೆಟ್ ಸ್ವಾಗತ ನೀಡಿದ ಕಾಂಗ್ರೆಸ್
ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದೆಯೇ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರೇ ಇದು ನಿಮ್ಮ ಸರ್ಕಾರದ ಆಡಳಿತ ವೈಖರಿಯೇ? ಸಾಕ್ಷಿ ಇದ್ದರೂ ನೀವು ಯಾರ ಮುಲಾಜಿಗೆ ಬಿದ್ದಿದ್ದೀರಿ? ವಿಡಿಯೋ ಅಸಲಿ ಎಂದು ನಿಮ್ಮ ಸರ್ಕಾರದ ಸಮಿತಿ ವರದಿ ನೀಡಿದ ನಂತರ ಆರೋಪಿತ ಅಧಿಕಾರಿಗೆ ಕ್ಲೀನ್ ಚಿಟ್ ಕೊಟ್ಟಿರೋ ಮರ್ಮವೇನು? ಕಾನೂನಿಗಿಂತ ಯಾರೂ ದೊಡ್ಡವರಲ್ಲ.ಕೂಡಲೆ ನ್ಯಾಯಯುತವಾಗಿ ನಡೆದುಕೊಂಡರೆ ಒಳಿತು. ನಿವೃತ್ತಿಯಾಗುವ ಅವಧಿಯಲ್ಲಿ ಅಧಿಕಾರಿಗೆ ಕ್ಲೀನ್ ಚಿಟ್ ನೀಡಿ ನೀವು ಮಹಿಳಾಮಣಿಗಳಿಗೆ ನೀಡುವ ಸಂದೇಶವಾದರೂ ಏನು?
ಇದೇ ಕಾಂಗ್ರೆಸ್ ಪಕ್ಷದ ನೈತಿಕತೆ? ಮಹಿಳಾ ಸಬಲೀಕರಣದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಮೇಲಿರುವ ಗೌರವ ಇದೇನಾ? ಎಂದು ಪ್ರಶ್ನಿಸಿದ್ದಾರೆ.

#RAshok #Siddaramaiah #DrParameshwar #KarnatakaPolitics #CongressGovernment #WomenSafety #JusticeForWomen #DGPControversy

Comments (0)

Your email address will not be published. Required fields are marked *

Back to top button