ಸಿನಿಮಾ

ದೂದ್ ಪೇಡ ಮೇಲೆ ಸ್ಯಾಮ್ ಕಣ್ಣು ಬಿದ್ದಿದ್ದು ಯಾಕೆ?

ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯ ವಿರುದ್ಧ ಹೋರಾಡಿ ಸಾವಿನ ದವಡೆಯಿಂದ ಮರಳಿ ಬಂದಿರುವ ನಟಿ ಸಮಂತಾ ರುತ್ ಪ್ರಭು, ಈಗ ಅಭಿನಯದ ಜೊತೆಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ‘ವೆಲ್ನೆಸ್ ಅಡ್ವೊಕೇಟ್’ ಆಗಿ ಬದಲಾಗಿದ್ದಾರೆ. ಅವರ ಈ ಹೊಸ ಪಯಣದಲ್ಲಿ ‘Take 20’ ಎಂಬ ಹೆಸರಿನ ಹೆಲ್ತ್ ಪಾಡ್‌ಕಾಸ್ಟ್ ಸರಣಿಯನ್ನು ಆರಂಭಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕೇವಲ ನಟಿಯಾಗಿ ಮಾತ್ರವಲ್ಲದೆ, ಆರೋಗ್ಯದ ಮಂತ್ರ ಹೇಳಿಕೊಡುವ ಮೆಂಟರ್ ಆಗಿ ಕಾಣಿಸಿಕೊಳ್ಳುತ್ತಿರುವ ಸಮಂತಾ, ಸಿನಿಮಾ ಕೆಲಸಗಳಿಗಿಂತ ಹೆಚ್ಚಾಗಿ ತಮ್ಮ ಫಿಟ್‌ನೆಸ್ ಮತ್ತು ಮಾನಸಿಕ ಶಾಂತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾದ ನಂತರ ಸಮಂತಾ ಅವರ ಜೀವನಶೈಲಿಯಲ್ಲಿ ಅಮೂಲಾಗ್ರ ಬದಲಾವಣೆಗಳು ಕಂಡುಬಂದಿವೆ. ಈ ‘ಸ್ಯಾಮ್ ವರ್ಷನ್ 2.0’ ನೋಡುಗರಿಗೆ ಸ್ಫೂರ್ತಿಯಾಗುತ್ತಿದ್ದು, ಪಾಡ್‌ಕಾಸ್ಟ್‌ನಲ್ಲಿ ಅವರು ಹಂಚಿಕೊಳ್ಳುತ್ತಿರುವ ಪ್ರತಿಯೊಂದು ಸತ್ಯಗಳು ಫ್ಯಾನ್ಸ್ ಗಮನ ಸೆಳೆಯುತ್ತಿವೆ.

ಆರೋಗ್ಯ ಎನ್ನುವುದು ಕೇವಲ ದೈಹಿಕವಾದದ್ದಲ್ಲ, ಅದು ಮಾನಸಿಕವಾಗಿ ನಾವು ಕಂಡುಕೊಳ್ಳುವ ಸಮತೋಲನ” ಎಂಬ ಸಂದೇಶವನ್ನು ಅವರು ಈ ಸರಣಿಯ ಮೂಲಕ ಸಾರುತ್ತಿದ್ದಾರೆ. ಸಮಂತಾ ಈಗ ಸ್ಯಾಂಡಲ್‌ವುಡ್ ನಟ ದಿಗಂತ್ ಅವರ ಸಿನಿಮಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಕನ್ನಡಿಗರಿಗೆ ಅಚ್ಚರಿ ನೀಡಿದ್ದಾರೆ. ದಿಗಂತ್ ಮತ್ತು ಸಮಂತಾ ಇಬ್ಬರೂ ಫಿಟ್‌ನೆಸ್ ಫ್ರೀಕ್‌ಗಳಾಗಿದ್ದು, ಅಡ್ವೆಂಚರ್ ಸ್ಪೋರ್ಟ್ಸ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಇದೇ ಕಾಮನ್ ಆಸಕ್ತಿ ಇಬ್ಬರ ನಡುವಿನ ದೋಸ್ತಿಗೆ ಕಾರಣವಾಗಿದೆಯೇ ಎಂಬ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ.

Comments (0)

Your email address will not be published. Required fields are marked *

Back to top button