‘ಧುರಂಧರ್-2’ ಬಗ್ಗೆ ಮೊನಾಲಿಸಾ ಶಾಕಿಂಗ್ ಸ್ಟೇಟ್ಮೆಂಟ್!

ಸೋಶಿಯಲ್ ಮೀಡಿಯಾದಲ್ಲಿ ನಟಿ ಮೊನಾಲಿಸಾ ಭೋಂಸ್ಲೆ ನೀಡಿರುವ ಒಂದು ಹೇಳಿಕೆ ಸಿನಿವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ‘ಧುರಂಧರ್: ಪಾರ್ಟ್ 2’ ಸಿನಿಮಾದಲ್ಲಿ ಸಾರಾ ಅರ್ಜುನ್ ನಿರ್ವಹಿಸಿರುವ ಪಾತ್ರದಲ್ಲಿ ನಾನೇ ನಟಿಸಬೇಕಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಆ ಪಾತ್ರವನ್ನು ನಾನು ಮಾಡಿದ್ದಿದ್ದರೆ ಸಿನಿಮಾ ಈ ಹೊತ್ತಿಗಾಗಲೇ ಬರೋಬ್ಬರಿ 5000 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿತ್ತು ಎಂಬ ಅಚ್ಚರಿಯ ಮಾತನ್ನಾಡಿದ್ದಾರೆ.
2026ರ ಯುಗಾದಿ ಮತ್ತು ಈದ್ ಹಬ್ಬದ ಸಂಭ್ರಮದ ನಡುವೆ ತೆರೆಕಂಡಿರುವ ಈ ಚಿತ್ರದ ಬಗ್ಗೆ ಮೊನಾಲಿಸಾ ನೀಡಿರುವ ಈ ಹೇಳಿಕೆ ಈಗ ಇನ್ಸ್ಟಾಗ್ರಾಮ್ ರೀಲ್ಸ್ಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪೂಜಾ ಮೋದಿ ಎಂಬುವವರ ಅಕೌಂಟ್ನಲ್ಲಿ ಶೇರ್ ಆಗಿರುವ ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಮಾಡುತ್ತಿದ್ದಾರೆ.
ಮೊನಾಲಿಸಾ ಅವರ ಈ ನೇರ ಮತ್ತು ವಿವಾದಾತ್ಮಕ ಹೇಳಿಕೆಯು ಸಿನಿಪ್ರಿಯರ ನಡುವೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಸಾರಾ ಅರ್ಜುನ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೊನಾಲಿಸಾ ಅವರ ಈ ‘5000 ಕೋಟಿ’ ಲೆಕ್ಕಾಚಾರದ ಮಾತು ಸದ್ಯ ಸ್ಯಾಂಡಲ್ವುಡ್ನ ಹಾಟ್ ಟಾಪಿಕ್ ಆಗಿದೆ.




