chennaiಕ್ರಿಕೆಟ್ಸುದ್ದಿ

ಧೋನಿ ಫಿಟ್‌ನೆಸ್ ಪರೀಕ್ಷೆ ಶೀಘ್ರ; ಡೆಲ್ಲಿ ವಿರುದ್ಧ ಕಣಕ್ಕಿಳಿಯುವರೇ ‘ತಲಾ’..?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಮಹತ್ವದ ಸುದ್ದಿಯೊಂದು, ಸ್ನಾಯುಸೆಳೆತದ ಕಾರಣದಿಂದ ಈ ಬಾರಿಯ ಐಪಿಎಲ್‌ನ ಮೊದಲ ಮೂರು ಪಂದ್ಯಗಳಿಂದ ದೂರ ಉಳಿದಿದ್ದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಶೀಘ್ರದಲ್ಲೇ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಪ್ರಸ್ತುತ 44 ವರ್ಷದ ಧೋನಿ ಅವರು ತಂಡದೊಂದಿಗೆ ಪಂದ್ಯಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ನೆಟ್ಸ್‌ನಲ್ಲಿ ಸತತವಾಗಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅವರು ಅಂತಿಮ ಫಿಟ್‌ನೆಸ್ ಪರೀಕ್ಷೆ ಎದುರಿಸಲಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಶನಿವಾರ ನಡೆಯಲಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ.

ಇದೇ ವೇಳೆ ಚೆನ್ನೈ ತಂಡಕ್ಕೆ ಮತ್ತೊಂದು ಸಮಾಧಾನಕರ ವಿಷಯವೆಂದರೆ, ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದ ವೇಳೆಗೆ ಬ್ರೆವಿಸ್ ಸಂಪೂರ್ಣವಾಗಿ ಗುಣಮುಖರಾಗಿ ತಂಡಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಧೋನಿ ಅವರ ಫಿಟ್‌ನೆಸ್ ವರದಿಗಾಗಿ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದು, ಅವರ ಉಪಸ್ಥಿತಿಯು ತಂಡದ ಬಲವನ್ನು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Comments (0)

Your email address will not be published. Required fields are marked *

Back to top button