ಜ್ಯೋತಿಷ್ಯಸುದ್ದಿ

ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ?

 ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚೌತಿ ತಿಥಿಯಾಗಿದೆ. ಏಪ್ರಿಲ್ 2026ರ ಮೊದಲ ವಾರದ ರಾಶಿ ಭವಿಷ್ಯದೊಂದಿಗೆ ನಿಮ್ಮ ವಾರವನ್ನು ಯೋಜಿಸಿ.

ಮೇಷ ರಾಶಿಯವರಿಗೆ ಈ ವಾರ ಉತ್ಸಾಹ ಮತ್ತು ಸುಸ್ತಿನ ನಡುವೆ ಸಾಗಲಿದ್ದು, ಕೆಲಸದ ಒತ್ತಡದ ನಡುವೆ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿದೆ. ವಿಶೇಷವಾಗಿ ವಸತಿ ಮತ್ತು ಆರೋಗ್ಯದ ಮೇಲಿನ ಅನಿರೀಕ್ಷಿತ ಖರ್ಚುಗಳ ಬಗ್ಗೆ ಎಚ್ಚರಿಕೆ ಅಗತ್ಯ.

ವೃಷಭ ರಾಶಿಯವರಿಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ದಿನಚರಿ ಪಾಲಿಸುವುದು ಲಾಭದಾಯಕವಾಗಿದ್ದು, ಕಚೇರಿಯಲ್ಲಿ ಬಾಸ್‌ನಿಂದ ಪ್ರಶಂಸೆ ಹಾಗೂ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಮಿಥುನ ರಾಶಿಯವರು ಮಾನಸಿಕ ದಣಿವಿನ ಜೊತೆಗೆ ಭುಜದ ನೋವಿನ ಸಮಸ್ಯೆ ಎದುರಿಸಬಹುದು, ಆದರೆ ಬಹಳ ದಿನಗಳಿಂದ ಬರಬೇಕಿದ್ದ ಹಣ ವಾಪಸ್ ಬರುವುದು ನೆಮ್ಮದಿ ನೀಡಲಿದೆ.

ಕಟಕ ರಾಶಿಯವರಿಗೆ ಮಾನಸಿಕ ಒತ್ತಡವು ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರಲಿದ್ದು, ದಾಂಪತ್ಯದಲ್ಲಿನ ಏರಿಳಿತಗಳನ್ನು ತಾಳ್ಮೆಯಿಂದ ನಿಭಾಯಿಸಬೇಕಿದೆ.

ಸಿಂಹ ರಾಶಿಯವರಿಗೆ ವಾರದ ಮಧ್ಯಭಾಗದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದ್ದು, ಉನ್ನತ ಅಧಿಕಾರಿಗಳ ಮಾರ್ಗದರ್ಶನದಿಂದ ಹೊಸ ಹುದ್ದೆ ಅಥವಾ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ.

ಕನ್ಯಾ ರಾಶಿಯವರು ಆರೋಗ್ಯದಲ್ಲಿ ಏರಿಳಿತ ಕಂಡರೂ, ಸಂಬಂಧಗಳಲ್ಲಿನ ದೊಡ್ಡ ಬದಲಾವಣೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ.

ತುಲಾ ರಾಶಿಯವರಿಗೆ ಅಧಿಕ ಓಡಾಟದಿಂದ ದಣಿವಾಗಲಿದ್ದು, ಅನಿರೀಕ್ಷಿತ ವೆಚ್ಚಗಳು ಅಥವಾ ದಂಡ ಪಾವತಿಸಬೇಕಾದ ಸಂದರ್ಭ ಬರಬಹುದು. ವೃಶ್ಚಿಕ ರಾಶಿಯವರು ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಲಿದ್ದರೂ, ಮೋಜಿಗಾಗಿ ಸ್ನೇಹ ಬೆಳೆಸುವವರ ಬಗ್ಗೆ ಜಾಗರೂಕರಾಗಿರಬೇಕು.

ಧನು ರಾಶಿಯವರು ಕಾರ್ಯನಿರತರಾಗಿದ್ದರೂ ವಿಶ್ರಾಂತಿಗೆ ಸಮಯ ಮೀಸಲಿಡುವುದು ಉತ್ತಮ, ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಸ್ವಾರ್ಥ ಕಂಡರೂ ನಿಮ್ಮ ಬೆಂಬಲ ಅವರಿಗೆ ಅಗತ್ಯವಿರುತ್ತದೆ.

ಮಕರ ರಾಶಿಯವರಿಗೆ ಕೆಲಸದ ಒತ್ತಡದಿಂದ ತಲೆನೋವು ಅಥವಾ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು, ಆದರೆ ಉದ್ಯೋಗಾಕಾಂಕ್ಷಿಗಳಿಗೆ ಈ ವಾರ ಶುಭ ಸುದ್ಧಿ ಕಾಯುತ್ತಿದೆ.

ಕುಂಭ ರಾಶಿಯವರು ನರಗಳ ದೌರ್ಬಲ್ಯ ಮತ್ತು ನಿದ್ರಾಹೀನತೆಯ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕಾಗಿದ್ದು, ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಮುಖ್ಯ.

ಮೀನ ರಾಶಿಯವರಿಗೆ ಈ ವಾರ ಅತ್ಯಂತ ಶುಭದಾಯಕವಾಗಿದ್ದು, ದೀರ್ಘಕಾಲದ ಸಮಸ್ಯೆಗಳು ಸ್ನೇಹಿತರ ಸಹಾಯದಿಂದ ಬಗೆಹರಿಯಲಿವೆ. ಎಲ್ಲ ಕಾರ್ಯಗಳಲ್ಲೂ ಯಶಸ್ಸು ಸಿಗಲಿದ್ದು, ಬಂಧು-ಮಿತ್ರರಿಂದ ಪ್ರಶಂಸೆ ವ್ಯಕ್ತವಾಗಲಿದೆ.

ಒಟ್ಟಾರೆಯಾಗಿ ಈ ವಾರ ಹೆಚ್ಚಿನ ರಾಶಿಗಳಿಗೆ ಆರೋಗ್ಯ ಮತ್ತು ವಿಶ್ರಾಂತಿಯ ಕಡೆಗೆ ಗಮನ ಹರಿಸುವುದು ಯಶಸ್ಸಿನ ಸೂತ್ರವಾಗಿದೆ.

Comments (0)

Your email address will not be published. Required fields are marked *

Back to top button