BAGALAKOTEರಾಜಕೀಯಸುದ್ದಿ

ಯತ್ನಾಳ್ ಗೆ ಪರೋಕ್ಷ ಸ್ವಾಗತ ಮಾಡಿದ ವಿಜಯೇಂದ್ರ

ಬಾಗಲಕೋಟೆ : ಬೈಎಲೆಕ್ಷನ್ ಸಮೀಪಿಸುತ್ತಿರುವ ಹಿನ್ನೆಲೆ ಬಾಗಲಕೋಟೆ ರಾಜಕೀಯ ರಂಗದಲ್ಲಿ ಚಟುವಟಿಕೆಗಳು ತೀವ್ರಗೊಂಡಿದ್ದು, ಬಿಜೆಪಿ ಗೆಲುವಿಗಾಗಿ ಕಮಲಪಾಳಯ ತಂತ್ರ ರೂಪಿಸುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ಬಾವುಟ ಹಾರಿಸಲು ಕೇಸರಿ ನಾಯಕರು ಸಜ್ಜಾಗಿದ್ದಾರೆ.
ಪಕ್ಷದೊಳಗಿನ ಅಸಮಾಧಾನಗಳು ಇದ್ದರೂ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಪ್ರಭಾವ ಇನ್ನೂ ಮುಂದುವರಿದಿದೆ. ಗೇಟ್ಪಾಸ್ ನೀಡಲಾಗಿದೆ ಎಂಬ ಮಾತುಗಳ ನಡುವೆ ಸಹ, ಯತ್ನಾಳ್ ಅವರಿಗೆ ಸ್ಥಳೀಯ ಮಟ್ಟದಲ್ಲಿ ಬೇಡಿಕೆ ಇದೆ .
ಈ ಹಿನ್ನೆಲೆ ಪ್ರಚಾರಕ್ಕೆ ಯತ್ನಾಳ್ ಬಂದರೆ ಸ್ವಾಗತಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರೋಕ್ಷವಾಗಿ ಸೂಚಿಸಿದ್ದಾರೆ. “ಬಿಜೆಪಿ ಗೆಲುವಿಗಾಗಿ ಯಾರೇ ಬಂದರೂ ಸ್ವಾಗತ” ಎಂಬ ಅವರ ಹೇಳಿಕೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆ ಸಂದರ್ಭದಲ್ಲೇ ಯತ್ನಾಳ್ ಕುರಿತು ವಿಜಯೇಂದ್ರ ಮೃದುವಾದ ನಿಲುವು ತಾಳಿರುವುದು ಪಕ್ಷದ ಒಳರಾಜಕೀಯದ ಮೇಲೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಬಾಗಲಕೋಟೆ ಬೈಎಲೆಕ್ಷನ್ನಲ್ಲಿ ಬಿಜೆಪಿ ಒಳಚರಿತ್ರೆ ಹಾಗೂ ನಾಯಕತ್ವದ ಸಮತೋಲನ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button