New delhiದೇಶ/ವಿದೇಶರಾಜಕೀಯಸುದ್ದಿ

ಪೆಟ್ರೋಲ್, ಡೀಸಲ್ ಸಾಕಷ್ಟಿದೆ – ಜನತೆಗೆ ಕಂಪನಿಗಳ ಭರವಸೆ

ನವದೆಹಲಿ: ದೇಶದ ಹಲವೆಡೆ ಪೆಟ್ರೋಲ್, ಡೀಸಲ್ ಕೊರತೆ ಇದೆ ಎನ್ನುವ ಸುಳ್ಳು ಮಾಹಿತಿ, ಕೆಲ ನಗರ ಮತ್ತು ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಹೈದರಾಬಾದ್ ಇತ್ಯಾದಿ ಕಡೆ ಜನರು ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದು ಫುಲ್ ಟ್ಯಾಂಕ್ ತುಂಬಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ಜನರು ಪೆಟ್ರೋಲ್ ಬಂಕ್​ಗಳಲ್ಲಿ ಎಂದಿಗಿಂತ ಹೆಚ್ಚು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ಪೆಟ್ರೋಲ್, ಡೀಸಲ್ ಕೊರತೆ ಎಲ್ಲಿಯೂ ಇಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ.

‘ಕೆಲ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಕೊರತೆ ಇದೆ ಎನ್ನುವ ವದಂತಿ ಆಧಾರ ರಹಿತವಾಗಿದೆ. ದೇಶಾದ್ಯಂತ ಎಲ್ಲಿಯೂ ಇಂಧನ ಕೊರತೆ ಇಲ್ಲ. ಭಾರತವು ಪೆಟ್ರೋಲ್ ಮತ್ತು ಡೀಸಲ್ ರಫ್ತು ಮಾಡುವ ದೇಶವಾಗಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದ ಕಚ್ಛಾ ತೈಲ, ಪೆಟ್ರೋಲ್, ಡೀಸಲ್ ಮತ್ತು ಎಟಿಎಫ್ ಸಂಗ್ರಹ ಇದೆ. ಸರಬರಾಜು ಸರಪಳಿ ಯಾವುದೇ ವ್ಯತ್ಯಯಗೊಳ್ಳದೆ ಕಾರ್ಯನಿರ್ವಹಿಸುತ್ತಿವೆ’ ಎಂದು ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯು ಹೇಳಿಕೆ ನೀಡಿದೆ.

ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ ಸಂಸ್ಥೆಯು ಪೂರ್ಣವಾಗಿ ಕಾರ್ಯಾಚರಿಸುತ್ತಿದ್ದು, ತಡೆರಹಿತವಾಗಿ ಇಂಧನ ಪೂರೈಕೆ ಮಾಡಲು ಬದ್ಧವಾಗಿದೆ. ನಾಗರಿಕರು ಆತಂಕಕ್ಕೊಳಗಾಗಿ ಅನಗತ್ಯವಾಗಿ ಇಂಧನ ಖರೀದಿಗೆ ಮುಂದಾಗಬಾರದೆಂದು ಕೇಳಿಕೊಳ್ಳುತ್ತೇವೆ. ಇಂಧನ ಲಭ್ಯತೆ ಸಾಕಷ್ಟಿದೆ ಮತ್ತು ಸ್ಥಿರವಾಗಿದೆ.

Comments (0)

Your email address will not be published. Required fields are marked *

Back to top button