
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದ ಷೇರು ಮಾರುಕಟ್ಟೆ ಅಲ್ಲೋಲವಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು ಚಿನ್ನ, ಬೆಳ್ಳಿ ದರ ದಿಢೀರ್ ಭಾರೀ ಇಳಿಕೆಯಾಗಿದೆ.
ಚಿನ್ನದ ದರ ಸುಮಾರು 1,200 ರೂ. ಇಳಿಕೆಯಾಗಿದ್ದರೆ ಕೆಜಿ ಬೆಳ್ಳಿ ದರ ಸುಮಾರು 30 ಸಾವಿರ ರೂ. ಇಳಿಕೆಯಾಗಿದೆ. ಮಾ. 20 ರಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ(ಫೈನ್ ಗೋಲ್ಡ್ 999) ದರ 14,722 ರೂ. ಇದ್ದರೆ ಇಂದು 13,514 ರೂ.ಗೆ ಇಳಿದಿದೆ.
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಶುಕ್ರವಾರ 14,369 ರೂ. ಇದ್ದರೆ ಈಗ 1,179 ರೂ. ಇಳಿಕೆಯಾಗಿ 13,190 ರೂ.ಗೆ ತಲುಪಿದೆ. 1 ಕೆಜಿ ಬೆಳ್ಳಿ (999) ದರ ಶುಕ್ರವಾರ 2,32,364 ರೂ. ಇದ್ದರೆ ಇಂದು 30,864 ರೂ. ಇಳಿಕೆಯಾಗಿ 2,01,500 ರೂ.ಗೆ ತಲುಪಿದೆ. ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದರಿಂದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾದ ಎಂಸಿಎಕ್ಸ್ ಷೇರು ಮೌಲ್ಯ ಇಂದು 100.10 ರೂ.(4.15%) ಇಳಿಕೆಯಾಗಿದೆ.




