ರಾಜಕೀಯರಾಜ್ಯಸುದ್ದಿ

ಶಾಲೆಯಲ್ಲಿದ್ದ ಸಿಲಿಂಡರ್ ಹೊತ್ತೊಯ್ದ ಕಳ್ಳರು : ಗ್ಯಾಸ್ ಸಿಲಿಂಡರ್​​ ಮೇಲೆ ಖದೀಮರ ಕಣ್ಣು..!

ಬೀದರ್: ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದೇ ಹೋಟೆಲ್ ಉದ್ಯಮಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದೆ. ಹಲವೆಡೆ ಹೋಟೆಲ್​ಗಳಿಗೆ ಬೀಗ ಜಡಿಯಲಾಗಿದೆ. ಗ್ಯಾಸ್​​ ಇಲ್ಲದೆ ಸಂಕಷ್ಟ ಎದುರಾಗಿದ್ದರೆ, ಕಳ್ಳರಿಗೆ ಇದೇ ಸಂಕಷ್ಟ ಹಬ್ಬವಾಗಿದೆ. ಹಾಡಹಗಲೇ ರಾಜಾರೋಷವಾಗಿ ಸಿಲಿಂಡರ್‌ ಕಳ್ಳತನ ಮಾಡಿತ್ತಿದ್ದಾರೆ.

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿದ್ದ 6 ಸಿಲಿಂಡರ್​​ಗಳನ್ನ ಕಳ್ಳರು ಹೊತ್ತೊಯ್ದಿದ್ದಾರೆ.​ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಪೂರೈಸಿದ್ದ ಸಿಲಿಂಡರ್​ಗಳನ್ನ ಅಡುಗೆಕೋಣೆ ಬೀಗ ಮುರಿದು ಕಳ್ಳರು ಹೊತ್ತೊಯ್ದಿದ್ದಾರೆ. ಭಾಲ್ಕಿ ನಿವಾಸಿ ಮಲ್ಲಿಕಾರ್ಜುನ ಕಂಟೆಪ್ಪಾ ಅವರು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಖರೀದಿಸಲು ಗೋದಾಮಿಗೆ ತೆರಳಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗ್ಯಾಸ್ ಸಿಲಿಂಡರ್ ಕದ್ದು ಪರಾರಿಯಾಗಿದ್ದ.

ಮಾರ್ಚ್ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಕಳುವಾದ ಗ್ಯಾಸ್ ಸಿಲಿಂಡರ್ ಹುಡುಕಿಕೊಡುವಂತೆ ಮಲ್ಲಿಕಾರ್ಜುನ ಕಂಟೆಪ್ಪಾ ಭಾಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ಯಾಸ್‌ಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಸಿಲಿಂಡರ್ ಮೇಲೆ ಕಣ್‌ ಹಾಕಿದ್ದಾರೆ.

Comments (0)

Your email address will not be published. Required fields are marked *

Back to top button