Chikkaballapuraರಾಜಕೀಯಸುದ್ದಿ

ಹೆಚ್ಚು ಬೇಡಿಕೆ, ಕಡಿಮೆ ಸೌಲಭ್ಯ: ಗ್ರಾಹಕರಿಗೆ ತೊಂದರೆ..!

ಚಿಕ್ಕಬಳ್ಳಾಪುರ: ಬಂದಿರೋದು 500 ಸಿಲಿಂಡರ್, 3 ಸಾವಿರ ಜನ ಬುಕ್ ಮಾಡಿದ್ರೆ ಕೊಡೋದು ಹೇಗೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರು ಪರದಾಡುವಂತಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಎಲ್‌ಪಿಜಿ ಸಿಲಿಂಡರ್ ಅಭಾವ ಹೆಚ್ಚಾಗುತ್ತಲೇ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಜನ ಕಿ.ಮೀಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಎಲ್‌ಪಿಜಿ ಸಿಲಿಂಡರ್‌ಗಾಗಿ ಮುಗಿಬಿದ್ದಿದ್ದಾರೆ. ಸಪ್ಲೈ ಆಗುವ ಸಿಲಿಂಡರ್‌ಗಳ ಸಂಖ್ಯೆ ಕಡಿಮೆಯಾಗಿ, ಇತ್ತ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಾವು ಸಿಲಿಂಡರ್ ಕೊಡೋದು ಹೇಗೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರು ಪ್ರಶ್ನಿಸಿದ್ದಾರೆ.

Comments (0)

Your email address will not be published. Required fields are marked *

Back to top button