ವಿಶೇಷಸುದ್ದಿ

ಆಸ್ಕರ್ ಕನಸು- ಇಂಡಿಯನ್ ಸಿನಿಮಾಗಳು ಯಾಕೆ ನಾಮಿನೇಟ್ ಆಗ್ತಿಲ್ಲ?

ಕೋಟ್ಯಂತರ ಭಾರತೀಯ ಚಿತ್ರಪ್ರೇಮಿಗಳ ಮತ್ತು ಚಲನಚಿತ್ರ ನಿರ್ದೇಶಕರ ದೊಡ್ಡ ಕನಸು ಅದೇ ಆಸ್ಕರ್ . ಪ್ರತಿವರ್ಷ ಆಸ್ಕರ್ ಅವಾರ್ಡ್ಸ್ ಅನೌನ್ಸ್ ಆದಾಗ ನಾವೆಲ್ಲರೂ ‘ನಮ್ಮ ಸಿನಿಮಾ ಯಾಕಿಲ್ಲ?’ ಅಂತ ಹುಡಕಾಡುತ್ತೇವೆ. ವಿಶ್ವದಲ್ಲೇ ಅತಿ ಹೆಚ್ಚು ಸಿನಿಮಾಗಳನ್ನು ತಯಾರಿಸುವ ನಾವು, ಆ ‘ಗೋಲ್ಡನ್ ಬೊಂಬೆ’ಯನ್ನು ಮನೆಗೆ ತರುವಲ್ಲಿ ಎಡವುತ್ತಿರುವುದು ಎಲ್ಲಿ? ಹಾಗಾದ್ರೆ ಭಾರತೀಯ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಬೆಳಗಲು ಬೇಕಾಗಿರುವ ಆ ‘ಮ್ಯಾಜಿಕ್’ ಏನು ?

ಆಸ್ಕರ್ ಅಂದ್ರೆ ಸಿಂಪಲ್ ಆಗಿ ಹೇಳ್ಬೇಕಂದ್ರೆ, ಆಸ್ಕರ್ ಅನ್ನೋದು ಸಿನಿಮಾ ಲೋಕದ ‘ವರ್ಲ್ಡ್ ಕಪ್’ ಇದ್ದಂತೆ. ಅಮೆರಿಕದವರು ಪ್ರತಿ ವರ್ಷ ಬೆಸ್ಟ್ ಸಿನಿಮಾಗಳಿಗೆ ಕೊಡುವ ಈ ಅವಾರ್ಡ್ ಇಡೀ ಪ್ರಪಂಚದಲ್ಲೇ ತುಂಬಾನೇ ಡಿಮ್ಯಾಂಡ್ ಇರೋ ಗೌರವ. ಮಾರ್ಚ್ ತಿಂಗಳ ಆಸುಪಾಸಲ್ಲಿ ನಡೆಯುವ ಈ ಫಂಕ್ಷನ್‌ನಲ್ಲಿ ಆ ಗೋಲ್ಡನ್ ಬೊಂಬೆ ಹಿಡಿದ್ರೆ, ಆ ಡೈರೆಕ್ಟರ್ ಅಥವಾ ನಟ ವರ್ಲ್ಡ್ ಫೇಮಸ್ ಆಗಿಬಿಡ್ತಾರೆ.

ನಾವು ಪ್ರತಿ ವರ್ಷ ಸಾವಿರಾರು ಪಿಕ್ಚರ್ ಮಾಡ್ತೀವಿ, ಆದ್ರೆ ಆಸ್ಕರ್ ಲಿಸ್ಟ್ ಬಂದಾಗ ನಮ್ಮ ಹೆಸರೇ ಇರಲ್ಲ. ಯಾಕೆ ಅಂದ್ರೆ, ಆಸ್ಕರ್ ಕಳುಹಿಸೋಕೆ ನಮ್ಮಲ್ಲಿ ಒಂದು ಕಮಿಟಿ ಇದೆ. ಅವರು ಸರಿಯಾದ ಪಿಕ್ಚರ್ ಸೆಲೆಕ್ಟ್ ಮಾಡೋ ಬದಲು ಕೆಲವೊಮ್ಮೆ ತಪ್ಪು ಪಿಕ್ಚರ್ ಕಳುಹಿಸ್ತಾರೆ. ಇನ್ನೊಂದು ಮೇನ್ ಪಾಯಿಂಟ್ ಅಂದ್ರೆ, ಆಸ್ಕರ್ ಗೆಲ್ಲೋಕೆ ಬರೀ ಕಥೆ ಇದ್ರೆ ಸಾಲದು, ಅಮೆರಿಕದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಪ್ರಚಾರ ಮಾಡಬೇಕು. ನಮ್ಮವರು ಅಲ್ಲಿ ಮಾರ್ಕೆಟಿಂಗ್ ಮಾಡೋದ್ರಲ್ಲಿ ಸ್ವಲ್ಪ ಹಿಂದೆ ಇದ್ದಾರೆ.

ನಮ್ಮ ಸಿನಿಮಾಗಳ ಕ್ವಾಲಿಟಿ ಬೆಳೆಯೋದು ಹೇಗೆ?
ನಾವು ಬರೀ ಫೈಟ್, ಬಿಲ್ಡಪ್ ಸಾಂಗ್ಸ್ ಅಂತ ಕೂರೋ ಬದಲು, ಪ್ರಪಂಚದ ಯಾರಿಗೇ ತೋರಿಸಿದ್ರೂ ಅರ್ಥ ಆಗೋ ತರಹದ ‘ರಿಯಲ್ ಕಥೆ’ಗಳನ್ನ ಮಾಡಬೇಕು. ಮೇಕಿಂಗ್‌ನಲ್ಲಿ ನಾವು ಸಕ್ಕತ್ ಆಗಿದ್ದೀವಿ, ಆದ್ರೆ ಸ್ಟೋರಿ ಹೇಳೋ ರೀತಿನ ಚೇಂಜ್ ಮಾಡ್ಕೋಬೇಕು. ಬರೀ ಮಸಾಲಾ ಪಿಕ್ಚರ್ ಬಿಟ್ಟು, ಕಮರ್ಷಿಯಲ್ ಆಗಿಯೂ ಇರಬೇಕು ಹಾಗೆ ಅದರಲ್ಲಿ ಒಂದು ಒಳ್ಳೆ ಮೆಸೇಜ್ ಕೂಡ ಇರಬೇಕು. ಅವಾಗ ಆಸ್ಕರ್ ಜ್ಯೂರಿ ಮೆಂಬರ್ಸ್‌ಗೆ ನಮ್ಮ ಸಿನಿಮಾ ಇಷ್ಟ ಆಗುತ್ತೆ.

ಆಸ್ಕರ್ ಹೋಗ್ಬೇಕು ಅಂದ್ರೆ ಸುಮ್ಮನೆ ಆಗಲ್ಲ. ಆ ಸಿನಿಮಾ ಅಮೆರಿಕದ ಯಾವುದಾದ್ರೂ ಥಿಯೇಟರ್‌ನಲ್ಲಿ ಅಟ್ಲೀಸ್ಟ್ ಒಂದು ವಾರ ಓಡಿರಬೇಕು. ಆಮೇಲೆ ನಮ್ಮ ದೇಶದಿಂದ ಅಫಿಷಿಯಲ್ ಆಗಿ ಒಬ್ಬರೇ ಹೋಗೋಕೆ ಚಾನ್ಸ್ ಇರೋದು. ಉಳಿದವರು ಪ್ರೈವೇಟ್ ಆಗಿ ಎಂಟ್ರಿ ಕೊಡಬಹುದು, ಆದ್ರೆ ಅದಕ್ಕೆ ಸಕ್ಕತ್ ದುಡ್ಡು ಮತ್ತೆ ಪ್ರಭಾವ ಬೇಕು.

ಭಾರತಕ್ಕೆ ಮೊದಲ ಆಸ್ಕರ್ ತಂದುಕೊಟ್ಟಿದ್ದು ಭಾನು ಅತೈಯ . ನಂತರ ದಂತಕಥೆ ಸತ್ಯಜಿತ್ ರೇ ಅವರಿಗೆ ಗೌರವ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2009ರಲ್ಲಿ ‘ಸ್ಲಮ್‌ಡಾಗ್ ಮಿಲಿಯನೇರ್’ ಸಿನಿಮಾ ಮೂಲಕ ಎ.ಆರ್. ರೆಹಮಾನ್, ಗುಲ್ಜಾರ್ ಮತ್ತು ರಸೂಲ್ ಪೂಕುಟ್ಟಿ ಅವರು ಆಸ್ಕರ್ ಸಾಧನೆ ಮಾಡಿದರು. ಇತ್ತೀಚೆಗೆ 2023ರಲ್ಲಿ ‘RRR’ ಚಿತ್ರದ “ನಾಟು ನಾಟು” ಹಾಡಿಗಾಗಿ ಎಂ.ಎಂ. ಕೀರವಾಣಿ ಮತ್ತು ಚಂದ್ರಬೋಸ್ ಅವರಿಗೆ ಆಸ್ಕರ್ ಸಂದಿತು. ಅದೇ ವರ್ಷ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ಕೂಡ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಯಿತು.
ನಾವು ತಾಂತ್ರಿಕವಾಗಿ ಮತ್ತು ಕಥೆಯ ವಿಚಾರದಲ್ಲಿ ನಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಂಡರೆ, ಮುಂದೊಂದು ದಿನ ಆಸ್ಕರ್ ವೇದಿಕೆಯ ಮೇಲೆ ನಮ್ಮ ಕನ್ನಡದ ಮತ್ತು ಭಾರತೀಯ ಧ್ವನಿ ಮೊಳಗುವುದರಲ್ಲಿ ಯಾವುದೇ ಸಂದೇಹವಿಲ್ಲ

Comments (0)

Your email address will not be published. Required fields are marked *

Back to top button