ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್; ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ!

ಮಾರ್ಚ್ 15ರ ವಾರಾಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ]ಸಿಹಿ ಸುದ್ದಿಯಾಗಿದೆ. ಇರಾನ್ ಯುದ್ಧದ ಜಾಗತಿಕ ವಿದ್ಯಮಾನಗಳ ಪರಿಣಾಮವೋ ಎಂಬಂತೆ, ಈ ತಿಂಗಳ ಮೊದಲ ಎರಡು ವಾರಗಳಲ್ಲಿ ಬೆಲೆಗಳು ಸತತವಾಗಿ ಇಳಿಕೆ ಹಾದಿಯಲ್ಲಿವೆ. ಕಳೆದ ಎರಡು ವಾರಗಳಲ್ಲಿ ಬೆಳ್ಳಿ ಬೆಲೆಯು ಗ್ರಾಮ್‌ಗೆ ಬರೋಬ್ಬರಿ 40 ರೂಪಾಯಿಯಷ್ಟು ಇಳಿಕೆಯಾಗಿದ್ದರೆ, ಚಿನ್ನದ ಬೆಲೆಯು ತಿಂಗಳ ಆರಂಭದಿಂದ ಈವರೆಗೆ ಗ್ರಾಮ್‌ಗೆ ಸುಮಾರು 1,230 ರೂಪಾಯಿಯಷ್ಟು ತಗ್ಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 22 ಕ್ಯಾರಟ್‌ನ ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 14,635 ರೂಪಾಯಿ ತಲುಪಿದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 15,966 ರೂಪಾಯಿಗೆ ಇಳಿಕೆಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 11,974 ರೂಪಾಯಿ ಇದೆ. ಬೆಂಗಳೂರು ಸೇರಿದಂತೆ ಮುಂಬೈ, ಕೋಲ್ಕತಾ ಮತ್ತು ಕೇರಳದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಬಹುತೇಕ ಸ್ಥಿರವಾಗಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದ ನಿರಾಳತೆ ನೀಡಿದೆ.
ಬೆಳ್ಳಿ ಬೆಲೆಯಲ್ಲೂ ಸಹ ಭಾರಿ ಇಳಿಕೆ ಕಂಡುಬಂದಿದ್ದು, ಬೆಂಗಳೂರು ಮತ್ತು ಮುಂಬೈನಲ್ಲಿ ಪ್ರತಿ ಗ್ರಾಮ್ ಬೆಳ್ಳಿ ಬೆಲೆ 275 ರೂಪಾಯಿ ಇದೆ. ಆದರೆ, ಚೆನ್ನೈ, ಕೇರಳ ಮತ್ತು ಭುವನೇಶ್ವರದಂತಹ ನಗರಗಳಲ್ಲಿ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಗ್ರಾಮ್‌ಗೆ 280 ರೂಪಾಯಿ ಆಸುಪಾಸಿನಲ್ಲಿದೆ. ಮಾರ್ಚ್ ಆರಂಭದಲ್ಲಿ 315 ರೂಪಾಯಿ ಇದ್ದ ಬೆಳ್ಳಿ ಬೆಲೆ ಈಗ 275 ರೂಪಾಯಿಗೆ ಇಳಿದಿರುವುದು ಗಮನಾರ್ಹ.
ಜಾಗತಿಕ ಮಾರುಕಟ್ಟೆಗಳನ್ನು ಗಮನಿಸಿದರೆ, ಭಾರತಕ್ಕಿಂತ ವಿದೇಶಗಳಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಇದೆ. ಕುವೇತ್‌ನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 13,894 ರೂಪಾಯಿ ಇದ್ದರೆ, ದುಬೈನಲ್ಲಿ 14,155 ರೂಪಾಯಿ ಇದೆ. ಸೌದಿ ಅರೇಬಿಯಾ ಮತ್ತು ಓಮನ್‌ನಲ್ಲಿಯೂ ಭಾರತಕ್ಕಿಂತ ಕಡಿಮೆ ದರದಲ್ಲಿ ಚಿನ್ನ ಲಭ್ಯವಿದೆ.




