#Exclusive NewsTop Newsಜಿಲ್ಲೆರಾಜಕೀಯ

ಕೋಲಾರಕ್ಕೆ ಮೆಡಿಕಲ್ ಕಾಲೇಜು ಮಂಜೂರು; ಕೆ.ವಿ. ಪ್ರಭಾಕರ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧ?

ಬೆಂಗಳೂರು: ಕೋಲಾರ ಜಿಲ್ಲೆಯ ದಶಕಗಳ ಕನಸಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ 17ನೇ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಹೊತ್ತಿದ್ದ ಕೋಲಾರಕ್ಕೆ ಈ ಬೃಹತ್ ಕೊಡುಗೆ ಮಂಜೂರು ಮಾಡಿಸುವಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಕೆ.ವಿ. ಪ್ರಭಾಕರ್ ಅವರ ಪಾತ್ರ ನಿರ್ಣಾಯಕವಾಗಿದೆ.

ತಮ್ಮ ಹುಟ್ಟೂರು ಹಾಗೂ ವೃತ್ತಿಜೀವನದ ಮೊದಲ ಹೆಜ್ಜೆಯೂರಿದ ಜಿಲ್ಲೆಗೆ ಈ ಯೋಜನೆ ದೊರೆತಿರುವುದಕ್ಕೆ ಕೆ.ವಿ. ಪ್ರಭಾಕರ್ ಅವರು ಸಿಎಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ನಿರ್ಧಾರವನ್ನು ‘ಜನಪರ ಹಾಗೂ ದೂರದೃಷ್ಟಿಯ ನಡೆ’ ಎಂದು ಅವರು ಬಣ್ಣಿಸಿದ್ದಾರೆ. ಈ ಯೋಜನೆಯು ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ಹಾಗೂ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಹೊಸ ಹಾದಿಯನ್ನು ತೆರೆಯಲಿದೆ.

ರಾಜಕೀಯ ಸಂಚಲನ:
ಈ ಘೋಷಣೆಯು ಕೇವಲ ಶೈಕ್ಷಣಿಕವಲ್ಲದೆ ರಾಜಕೀಯವಾಗಿಯೂ ಭಾರಿ ಕುತೂಹಲ ಮೂಡಿಸಿದೆ. ಸಿಎಂ ಅತ್ಯಾಪ್ತ ವಲಯದಲ್ಲಿರುವ ಕೆ.ವಿ. ಪ್ರಭಾಕರ್ ಅವರು ಶೀಘ್ರದಲ್ಲೇ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿ, ಕೋಲಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು, ಈ ಮೆಡಿಕಲ್ ಕಾಲೇಜು ಮಂಜೂರಾತಿಯ ಮೂಲಕ ಜಿಲ್ಲೆಯ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Comments (0)

Your email address will not be published. Required fields are marked *

Back to top button