Top Newsರಾಜಕೀಯವಾಣಿಜ್ಯ

ತೋಟಗಾರಿಕೆ ಕ್ಷೇತ್ರಕ್ಕೆ ಹೈಟೆಕ್ ಸ್ಪರ್ಶ; ಎರಡು ಬೃಹತ್ ಶೀತಲಗೃಹಗಳ ಸ್ಥಾಪನೆಗೆ ಸಿಎಂ ಘೋಷಣೆ!


ಬೆಂಗಳೂರು: ರೈತರ ಆದಾಯ ವೃದ್ಧಿಯ ‘ಇಂಜಿನ್’ ಎಂದೇ ಕರೆಯಲಾಗುವ ತೋಟಗಾರಿಕೆ ಇಲಾಖೆಗೆ ಸಿಎಂ ಸಿದ್ದರಾಮಯ್ಯ ತಮ್ಮ 17ನೇ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದಾರೆ. ಮಾರುಕಟ್ಟೆ ಆಧಾರಿತ ಕೃಷಿಗೆ ಒತ್ತು ನೀಡಲು ಸರ್ಕಾರ ನಿರ್ಧರಿಸಿದ್ದು, ಬೆಳೆಗಳ ರಕ್ಷಣೆಗಾಗಿ ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಅಡಿಕೆ ಮತ್ತು ತೆಂಗು ಬೆಳೆಗಾರರನ್ನು ಕಾಡುತ್ತಿರುವ ಕೀಟಬಾಧೆ ತಡೆಗೆ 10 ಕೋಟಿ ರೂ. ವಿಶೇಷ ಅನುದಾನ ಮೀಸಲಿಡಲಾಗಿದೆ.


ಬಜೆಟ್‌ನ ಮುಖ್ಯಾಂಶಗಳು:

  • ಬೃಹತ್ ಶೀತಲಗೃಹಗಳು: ತೋಟಗಾರಿಕೆ ಉತ್ಪನ್ನಗಳ ಸಂರಕ್ಷಣೆಗಾಗಿ ದಾವಣಗೆರೆಯ ಹೊನ್ನಾಳಿ ಮತ್ತು ವಿಜಯಪುರದ ತೊರವಿಯಲ್ಲಿ 64 ಕೋಟಿ ರೂ. ವೆಚ್ಚದಲ್ಲಿ 12,000 ಮೆ.ಟನ್ ಸಾಮರ್ಥ್ಯದ ಶೀತಲಗೃಹ ನಿರ್ಮಾಣ!
  • ಮಣ್ಣಿಲ್ಲದ ಕೃಷಿಗೆ ಆದ್ಯತೆ: ನೀರಿನ ಉಳಿತಾಯಕ್ಕಾಗಿ ಹೈಡ್ರೋಪೊನಿಕ್ಸ್ (Hydroponics) ಮತ್ತು ಕೋಕೋಪೀಟ್ ಆಧಾರಿತ ಆಧುನಿಕ ಕೃಷಿ ಪದ್ಧತಿಗೆ ಪ್ರೋತ್ಸಾಹ.
  • ಹೊಸ ತೋಟಗಾರಿಕೆ ಕಾಲೇಜು: ಗದಗ ಜಿಲ್ಲೆಯ ಡಂಬಳದಲ್ಲಿ ನೂತನ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಅಸ್ತು.
  • ಸಮಗ್ರ ರೋಗ ನಿಯಂತ್ರಣ: ಅಡಿಕೆಯ ಎಲೆ ಚುಕ್ಕಿ, ಹಳದಿ ಎಲೆ ರೋಗ ಹಾಗೂ ತೆಂಗಿನ ಕಪ್ಪು ತಲೆ ಹುಳು ಬಾಧೆ ತಡೆಯಲು ವಿವಿಗಳ ಸಹಯೋಗದೊಂದಿಗೆ ಕ್ರಮ.
  • ಲಿಂಗಾಂಬುಧಿ ಸಸ್ಯ ತೋಟ: ಪ್ರವಾಸೋದ್ಯಮಕ್ಕೆ ವೇಗ ನೀಡಲು ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟದ ಸಮಗ್ರ ಅಭಿವೃದ್ಧಿ.
  • PPP ಮಾದರಿ ಬಳಕೆ: ಇಲಾಖೆಯ ನರ್ಸರಿಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಸಂಸ್ಕರಣಾ ಘಟಕಗಳ ಸ್ಥಾಪನೆ.

Comments (0)

Your email address will not be published. Required fields are marked *

Back to top button