ಮನರಂಜನೆ

ಬಿಗ್ ಬಾಸ್ ಮಾಳು’ಕುಣಿಯುವೆ’ ಆಲ್ಬಂ ಹಾಡಿನ ಪ್ರೋಮೋ ರಿಲೀಸ್

ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ಗಾಯಕ ಮಾಳು ಅವರು ಈಗ ತಮ್ಮ ವೃತ್ತಿಜೀವನದ ಹೊಸ ಮೈಲಿಗಲ್ಲಿನತ್ತ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆಯೊಂದನ್ನು ಸಿದ್ಧಪಡಿಸಿದ್ದು, ಬಹುನಿರೀಕ್ಷಿತ ಆಲ್ಬಂ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ.

ಈ ಹೊಸ ಹಾಡಿಗೆ ‘ಕುಣಿಯುವೆ..’ ಎಂದು ಹೆಸರಿಡಲಾಗಿದ್ದು, ಬಿಡುಗಡೆಯಾಗಿರುವ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಶೇಷವೆಂದರೆ, ಈ ಹಾಡಿನಲ್ಲಿ ಮಾಳು ಅವರು ಅತ್ಯಂತ ಭವ್ಯವಾದ ರಾಜನ ಗೆಟಪ್’ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ವೃತ್ತಿಯಲ್ಲಿ ಮೂಲತಃ ಗಾಯಕರಾಗಿರುವ ಮಾಳು, ಈ ಹಿಂದೆ ಅನೇಕ ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಂಡಿದ್ದರು. ಈಗ ಈ ಆಲ್ಬಂ ಸಾಂಗ್ ಮೂಲಕ ಮತ್ತೆ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಪ್ರೋಮೋದಲ್ಲಿನ ಅವರ ರಾಜಗಾಂಭೀರ್ಯದ ನೋಟ ಮತ್ತು ಹಾಡಿನ ರಿದಮ್ ಗಮನ ಸೆಳೆಯುತ್ತಿದ್ದು, ಪೂರ್ಣ ಹಾಡಿನ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button