#Exclusive News

ರಾಜ್ಯ ಬಿಜೆಪಿಯಲ್ಲಿ ಘರ್ ವಾಪಸಿ ಸದ್ದು.!

ಬೆಂಗಳೂರು :

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಬಿಜೆಪಿಯ ಮಾಜಿ‌ ಶಾಸಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಂಬಂಧಿ ಎಸ್. ಐ. ಚಿಕ್ಕನಗೌಡರ್ ಕಳೆದ 20 ದಿನಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜಗದೀಶ್ ಶೆಟ್ಟರ್ ಮುಂದಾಳತ್ವದಲ್ಲಿ ಕೈ ಹಿಡಿದಿದ್ದ ಚಿಕ್ಕನಗೌಡರ್ ಮತ್ತೆ ಬಿಜೆಪಿಗೆ ವಾಪಸ್ಸಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದರು.

ಮಾಜಿ ಶಾಸಕ ರೇಣುಕಾಚಾರ್ಯ ಜೊತೆ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷರಾದ ಚಿಕ್ಕನಗೌಡರ್..!!

ಕಳೆದ ವಿಧಾನಸಭಾ ಚುನಾವಣೆ ಸೋತ ಬಳಿಕ ಸೈಲೆಂಟ್ ಆಗಿದ್ದ ಚಿಕ್ಕನಗೌಡರ್ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹಾಗೇಯೆ ಕಾಂಗ್ರೆಸ್ ಗೆ ಸೇರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ರಾಜ್ಯ ಬಿಜೆಪಿಯಲ್ಲಾದ ಬಹುದೊಡ್ಡ ಬದಲಾವಣೆಗಳ ಬಳಿಕ ಕಾಂಗ್ರೆಸ್ ತೊರೆದು ಕಮಲ ಹಿಡಿಯಲು ತಯಾರಾಗೋ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.

Comments (0)

Your email address will not be published. Required fields are marked *

Back to top button